ADVERTISEMENT

Covid-19 World Update: ಅಮೆರಿಕ–ಬ್ರೆಜಿಲ್‌ನಲ್ಲೇ 1 ಕೋಟಿ ಸೋಂಕು ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 4:17 IST
Last Updated 5 ಸೆಪ್ಟೆಂಬರ್ 2020, 4:17 IST
   

ನ್ಯೂಯಾರ್ಕ್‌: ಅಮೆರಿಕ ಹಾಗೂ ಬ್ರೆಜಿಲ್‌ನಲ್ಲಿಯೇ ಬರೋಬ್ಬರಿ 1.02 ಕೋಟಿ ಕೋವಿಡ್–19 ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ಕೋವಿಡ್–19 ರಿಸೋರ್ಸ್‌ ಸೆಂಟರ್ ಮಾಹಿತಿ ನೀಡಿದೆ.

ಅಮೆರಿಕದಲ್ಲಿ ಈವರೆಗೆ ಒಟ್ಟು 61,99,998 ಲಕ್ಷ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 1,87,750 ಸೋಂಕಿತರು ಮೃತಪಟ್ಟಿದ್ದು,22,83,454 ಮಂದಿ ಗುಣಮುಖರಾಗಿದ್ದಾರೆ. ಬ್ರೆಜಿಲ್‌ನಲ್ಲಿ40,91,801 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ125,502 ಮಂದಿ ಸಾವಿಗೀಡಾಗಿದ್ದಾರೆ. ಉಳಿದಂತೆ 34,64,278 ಸೋಂಕಿತರು ಗುಣಮುಖರಾಗಿದ್ದಾರೆ.

ವಿವಿಯ ಮಾಹಿತಿ ಪ್ರಕಾರಜಗತ್ತಿನಾದ್ಯಂತ ಇದುವರೆಗೆ ಒಟ್ಟು 2,65,22,393 ಪ್ರಕರಣಗಳು ವರದಿಯಾಗಿದ್ದು, 8,73,270 ಮಂದಿ ಮೃತಪಟ್ಟಿದ್ದಾರೆ ಹಾಗೂ 1,76,38,272 ಸೋಂಕಿತರು ಗುಣಮುಖರಾಗಿದ್ದಾರೆ.

ADVERTISEMENT

ರಷ್ಯಾದಲ್ಲಿ1,011,987,ಪೆರುವಿನಲ್ಲಿ6,70,145, ಕೊಲಂಬಿಯಾದಲ್ಲಿ6,41,574, ದಕ್ಷಿಣ ಆಫ್ರಿಕಾದಲ್ಲಿ6,35,078 ಮತ್ತು ಮೆಕ್ಸಿಕೊದಲ್ಲಿ6,23,090 ಪ್ರಕರಣಗಳು ವರದಿಯಾಗಿವೆ.

ಮೆಕ್ಸಿಕೊದಲ್ಲಿ66,851, ಇಂಗ್ಲೆಂಡ್‌ನಲ್ಲಿ41,626, ಇಟಲಿಯಲ್ಲಿ35,518, ಫ್ರಾನ್ಸ್‌ನಲ್ಲಿ 30,730, ಸ್ಪೇನ್‌ನಲ್ಲಿ29,418, ಪೆರುವಿನಲ್ಲಿ29,405 ಮತ್ತು ಇರಾನ್‌ನಲ್ಲಿ21,044 ಸೋಂಕಿತರು ಮೃತಪಟ್ಟಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯುಕೋವಿಡ್–19 ಸೋಂಕನ್ನು ಜಾಗತಿಕ ಪಿಡುಗು ಎಂದು ಮಾರ್ಚ್‌ 11ರಂದು ಘೋಷಿಸಿತ್ತು.

ಭಾರತದಲ್ಲಿ31,07,223 ಸೋಂಕಿತರು ಗುಣಮುಖ
ದೇಶದಲ್ಲಿ ಇದುವರೆಗೆ ಒಟ್ಟು40,23,179 ಪ್ರಕರಣಗಳು ದೃಢಪಟ್ಟಿದ್ದು, ಇದರಲ್ಲಿ31,07,223 ಸೋಂಕಿತರು ಗುಣಮುಖರಾಗಿದ್ದಾರೆ.69,561 ಮಂದಿ ಮೃತಪಟ್ಟಿದ್ದು, ಇನ್ನೂ8,46,395 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.