ADVERTISEMENT

Covid-19 World update| ಅಮೆರಿಕದಲ್ಲಿ 80 ಲಕ್ಷ ಸಮೀಪಿಸಿದ ಕೋವಿಡ್‌ ಪ್ರಕರಣಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2020, 17:16 IST
Last Updated 15 ಅಕ್ಟೋಬರ್ 2020, 17:16 IST
ಅಮೆರಿಕದಲ್ಲಿ ಲೇಕ್‌ವೋಡ್‌ನಲ್ಲಿ ಕೊರೊನಾ ವೈರಸ್‌ಗೆ ಲಸಿಕೆ ಪಡೆಯುತ್ತಿರುವ ಬಾಲಕಿ (ಎಎಫ್‌ಪಿ)
ಅಮೆರಿಕದಲ್ಲಿ ಲೇಕ್‌ವೋಡ್‌ನಲ್ಲಿ ಕೊರೊನಾ ವೈರಸ್‌ಗೆ ಲಸಿಕೆ ಪಡೆಯುತ್ತಿರುವ ಬಾಲಕಿ (ಎಎಫ್‌ಪಿ)   

ವಾಷಿಂಗ್ಟನ್‌: ಅಮೆರಿಕದಲ್ಲಿ ಕೋವಿಡ್‌ ಪ್ರಕರಣಗಳು 80 ಲಕ್ಷ ಸಮೀಪಿಸಿವೆ. ಸದ್ಯ ಅಮೆರಿಕದಲ್ಲಿ 79,33,656 ಕೋವಿಡ್‌ ಪ್ರಕರಣಗಳಿವೆ. ಈ ವರೆಗೆ 2,17,220 ಮಂದಿ ಮೃತಪಟ್ಟಿದ್ದಾರೆ.

ಒಟ್ಟಾರೆ ಜಗತ್ತಿನಲ್ಲಿ 3,86,20,496 ಪ್ರಕರಣಗಳು ದಾಖಲಾಗಿದ್ದು, ಈ ವರೆಗೆ 10,93,921 ಮಂದಿ ಮೃತಪಟ್ಟಿದ್ದಾರೆ.

ವಿಶ್ವದಲ್ಲಿ ಅತಿ ಹೆಚ್ಚು ಕೋವಿಡ್‌ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಸದ್ಯ 73,07,097 ಪ್ರಕರಣಗಳು ದಾಖಲಾಗಿದ್ದು, 1,11,266 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಬ್ರೆಜಿಲ್‌ನಲ್ಲಿ 51,40,863 ಪ್ರಕರಣಗಳಿದ್ದು, 1,51,747 ಮಂದಿ ಸಾವಿಗೀಡಾಗಿದ್ದಾರೆ. ರಷ್ಯಾದಲ್ಲಿ 13,46,380 ಸೋಂಕು ಪ್ರಕರಣಗಳಿವೆ. 23,350 ಮಂದಿ ಮೃತಪಟ್ಟಿದ್ದಾರೆ.

ಜಾಗತಿಕವಾಗಿ ಕೊರೊನಾ ವೈರಸ್ ಸೋಂಕು ಹರಡುವಿಕೆ ಮತ್ತೆ ತೀವ್ರಗೊಂಡಿರುವ ಬೆನ್ನಲ್ಲೇ ಫ್ರಾನ್ಸ್‌ನಲ್ಲಿ ಎರಡನೇ ಅಲೆ ಪ್ರಭಾವ ಬೀರುತ್ತಿರುವುದರಿಂದ ಕರ್ಫ್ಯೂ ಘೋಷಿಸಲಾಗಿದೆ.

ಜುಲೈನಿಂದ ಫ್ರಾನ್ಸ್‌ನಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗಿರುವುದರಿಂದ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮಾಕ್ರಾನ್‌ ಕರ್ಫ್ಯೂ ಘೋಷಿಸಿದ್ದಾರೆ. ಪ್ಯಾರಿಸ್‌ ಸೇರಿದಂತೆ ಹಲವು ನಗರಗಳಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.