ADVERTISEMENT

Covid-19 World Update: ವಿಶ್ವದಾದ್ಯಂತ 1.5 ಕೋಟಿಗೂ ಹೆಚ್ಚು ಸಕ್ರಿಯ ಪ್ರಕರಣ

ಏಜೆನ್ಸೀಸ್
Published 18 ನವೆಂಬರ್ 2020, 4:07 IST
Last Updated 18 ನವೆಂಬರ್ 2020, 4:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌:ವಿಶ್ವದಾದ್ಯಂತ ಈವರೆಗೆ 5.59 ಕೋಟಿಗೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, 13 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 3.89 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ ಎಂಬುದು ವರ್ಲ್ಡೊ ಮೀಟರ್ ಕೊವಿಡ್ ಟ್ರ್ಯಾಕರ್ ಅಂಕಿಅಂಶಗಳಿಂದ ತಿಳಿದುಬಂದಿದೆ.

ಅತಿಹೆಚ್ಚು ಮಂದಿ ಸೋಂಕಿತರಾಗಿರುವ ಅಮೆರಿಕದಲ್ಲಿ ಈವರೆಗೆ 1.1 ಕೋಟಿಗೂ ಹೆಚ್ಚು ಜನ ಸೋಂಕಿಗೀಡಾಗಿದ್ದಾರೆ. 2.54 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 70.87 ಲಕ್ಷಕ್ಕೂ ಹೆಚ್ಚು ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸದ್ಯ ಸುಮಾರು 43.53 ಸಕ್ರಿಯ ಪ್ರಕರಣಗಳಿವೆ.

ಜೋರ್ಡಾನ್‌ನಲ್ಲಿ ಒಂದೇ ದಿನ 6,454 ಪ್ರಕರಣಗಳು ದೃಡಪಟ್ಟಿದ್ದು, 66 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಅಲ್ಲಿ ಈವರೆಗೆ ಸೋಂಕು ತಗುಲಿದವರ ಸಂಖ್ಯೆ 1,55,993ಕ್ಕೆ ಏರಿಕೆಯಾಗಿದ್ದು, 1,909 ಮಂದಿ ಅಸುನೀಗಿದ್ದಾರೆ.

ADVERTISEMENT

ಪಾಕಿಸ್ತಾನದಲ್ಲಿ ಒಂದೇ ದಿನ 2,298 ಮಂದಿ ಸೋಂಕಿತರಾಗಿದ್ದು, 37 ಸಾವು ಸಂಭವಿಸಿದೆ. ಅಲ್ಲಿ ಈವರೆಗೆ 3.63 ಲಕ್ಷಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದು, 7,230 ಸಾವು ಸಂಭವಿಸಿದೆ. ಸದ್ಯ 30,362 ಸಕ್ರಿಯ ಪ್ರಕರಣಗಳಿವೆ.

ಭಾರತದಲ್ಲಿ 4,48,660, ಬ್ರೆಜಿಲ್‌ನಲ್ಲಿ 3,83,423, ಫ್ರಾನ್ಸ್‌ನಲ್ಲಿ 18,47,330, ರಷ್ಯಾದಲ್ಲಿ 4,61,178 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.