ವಾಷಿಂಗ್ಟನ್: ಕೊರೊನಾ ವೈರಸ್‌ಗೆ ಜಗತ್ತಿನಾದ್ಯಂತ ಈ ವರೆಗೆ ಸಾವಿಗೀಡಾದವರ ಸಂಖ್ಯೆ ಭಾನುವಾರ 6 ಲಕ್ಷ ದಾಟಿತು. ಸದ್ಯ ವಿಶ್ವದಲ್ಲಿ 6,03,111 ಮಂದಿ ಕೋವಿಡ್‌ಗೆ ಪ್ರಾಣ ತೆತ್ತಿದ್ದಾರೆ.
ಇನ್ನೊಂದೆಡೆ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ 1,43,40,653 ಗೆ ಏರಿದೆ. ಎಂದಿನಂತೆ ಅಮೆರಿಕ 37,30,312 ಸೋಂಕಿತರೊಂದಿಗೆ ಅಗ್ರ ಸ್ಥಾನದಲ್ಲಿದೆ. ಅಮೆರಿಕದಲ್ಲಿ 1,40,218 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ಬ್ರೆಜಿಲ್‌ನಲ್ಲಿ 20,74,860 ಸೋಂಕಿತರಿದ್ದರೆ, ಭಾರತದಲ್ಲಿ 10,77,781 ಕೋವಿಡ್ ಪ್ರಕರಣಗಳಿವೆ. ರಷ್ಯಾದಲ್ಲಿ 7,70,311 ಮಂದಿಗೆ ಕೋವಿಡ್ ಇದೆ.
ದಕ್ಷಿಣ ಆಫ್ರಿಕಾ ಕೊರೊನಾ ವೈರಸ್‌ನ ಹೊಸ ಹಾಟ್‌ಸ್ಪಾಟ್ ಆಗಿ ಗುರುತಿಸಿಕೊಂಡಿದ್ದು, ಪ್ರಕರಣಗಳ ಸಂಖ್ಯೆ ದಿನೇ ದಿನೆ ಏರುತ್ತಿದೆ. ಸದ್ಯ ಅಲ್ಲಿ 3,50,879 ಮಂದಿಗೆ ಸೋಂಕು ತಗುಲಿದೆ. 4,948 ಮೃತಪಟ್ಟಿದ್ದಾರೆ.
ಕೊರೊನಾ ವೈರಸ್ ಅನ್ನು ನಿಯಂತ್ರಿಸುವ ದೃಷ್ಟಿಯಲ್ಲಿ ಆಸ್ಟ್ರೇಲಿಯಾದಲ್ಲಿ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕೆಲ ದಿನಗಳಿಂದ ಅಲ್ಲಿ ಕೊರೊನಾ ವೈರಸ್ ಸೊಂಕು ಪ್ರಕರಣಗಳು ದಿಢೀರ್ ಏರಿಕೆಯಾಗಿವೆ.
ಪಾಕಿಸ್ತಾನದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 2.63,496ಕ್ಕೆ ಏರಿಕೆಯಾಗಿದೆ. ಇನ್ನು ವೈರಸ್‌ನ ಉಗಮಸ್ಥಾನವಾದ ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ ವರದಿಯಾಗಿರುವುದು ಕೇವಲ 13 ಪ್ರಕರಣಗಳು ಮಾತ್ರ.
ಕೊರೊನಾ ವೈರಸ್‌ಗೆ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಬಾಂಗ್ಲಾದೇಶ ಮುಂದಾಗಿದೆ. ಇನ್ನೊಂದೆಡೆ ಜಗತ್ತಿನಲ್ಲಿ ತಯಾರಾಗುತ್ತಿರುವ ಲಸಿಕೆಗಳ ಮಾಹಿತಿಯನ್ನು ರಷ್ಯಾ ರಹಸ್ಯವಾಗಿ ಪಡೆಯುತ್ತಿದೆ ಎಂಬ ಆರೋಪವನ್ನು ಆ ದೇಶವು ಭಾನುವಾರ ನಿರಾಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.