ADVERTISEMENT

Covid-19 World Updates: ಒಂದೂವರೆ ಲಕ್ಷ ಹೊಸ ಪ್ರಕರಣ

ಏಜೆನ್ಸೀಸ್
Published 30 ನವೆಂಬರ್ 2020, 15:34 IST
Last Updated 30 ನವೆಂಬರ್ 2020, 15:34 IST
ಸಾಂದರ್ಭಿಕ ಚಿತ್ರ (ಎಎಫ್‌ಪಿ)
ಸಾಂದರ್ಭಿಕ ಚಿತ್ರ (ಎಎಫ್‌ಪಿ)   

ವಾಷಿಂಗ್ಟನ್: ಇಂದು ಪ್ರಪಂಚದಾದ್ಯಂತ ಹೊಸದಾಗಿ 1.52 ಲಕ್ಷ ಜನರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದು, 2,773 ಮೃತಪಟ್ಟಿದ್ದಾರೆ ಎಂದು ವರ್ಡೋಮೀಟರ್ ವೆಬ್‌ಸೈಟ್‌ ವರದಿಮಾಡಿದೆ. ಇದರಿಂದಾಗಿ ಪ್ರಪಂಚದಾದ್ಯಂತ ಸೋಂಕು ಪ್ರಕರಣಗಳ ಸಂಖ್ಯೆ 6.32 ಕೋಟಿಗೂ ಹೆಚ್ಚಾಗಿದ್ದು, ಸಾವಿನ ಸಂಖ್ಯೆ 14,67,624ಕ್ಕೆ ತಲುಪಿದೆ.

ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ರಾಷ್ಟ್ರಗಳ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ರಷ್ಯಾದಲ್ಲಿ ಇಂದು ಇದುವರೆಗೆ 26,338 ಹೊಸ ಪ್ರಕರಣಗಳು ವರದಿಯಾಗಿವೆ. ಮಾತ್ರವಲ್ಲದೆ 368 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಈ ದೇಶದಲ್ಲಿ ಪ್ರಕರಣಗಳ ಸಂಖ್ಯೆ22.95ಲಕ್ಷಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 39,895 ಆಗಿದೆ.

ವರ್ಡೋಮೀಟರ್ ಮಾಹಿತಿ ಪ್ರಕಾರ ಇಂದು ಅಮೆರಿಕದಲ್ಲಿ 4,431, ಭಾರತದಲ್ಲಿ 12,524 ಪ್ರಕರಣಗಳು ವರದಿಯಾಗಿವೆ.

4.3 ಕೋಟಿ ಸೋಂಕಿತರು ಗುಣಮುಖ
ಇಂದು 1.70 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಒಟ್ಟು ಗುಣಮುಖರಾದವರ ಸಂಖ್ಯೆ 4 ಕೋಟಿ 37 ಲಕ್ಷಕ್ಕೂ ಹೆಚ್ಚಾಗಿದೆ. 94.4 ಲಕ್ಷ ಪ್ರಕರಣಗಳು ವರದಿಯಾಗಿರುವ ಭಾರತದಲ್ಲಿ, 88.6 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಅತಿಹೆಚ್ಚು (1 ಕೋಟಿ 37 ಲಕ್ಷ) ಪ್ರಕರಣಗಳು ದಾಖಲಾಗಿರುವ ಅಮೆರಿಕದಲ್ಲಿ ಈವರೆಗೆ ಒಟ್ಟು 81 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ರಷ್ಯಾದಲ್ಲಿ 55 ಲಕ್ಷ ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಒಟ್ಟಾರೆ ಇನ್ನೂ 1.83 ಕೋಟಿ ಪ್ರಕರಣಗಳು ಸಕ್ರಿಯವಾಗಿದ್ದು, ಇದರಲ್ಲಿ 1.05 ಲಕ್ಷ ಸೋಂಕಿತರು ಸ್ಥಿತಿ ಗಂಭೀರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.