ADVERTISEMENT

Covid-19 World update | ಅಮೆರಿಕದಲ್ಲಿ 28ಲಕ್ಷ ಜನರಿಗೆ ಸೋಂಕು; 1.29ಲಕ್ಷ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜುಲೈ 2020, 16:51 IST
Last Updated 4 ಜುಲೈ 2020, 16:51 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಾಷಿಂಗ್ಟನ್‌:ಅಮೆರಿಕದಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ 28,09,108 ಜನರಿಗೆ ಸೋಂಕು ತಗುಲಿದ್ದು, ಇದರಲ್ಲಿ 1,29,478 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದುಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾವೈರಸ್ ಸಂಶೋದನಾ ಕೇಂದ್ರ ಮಾಹಿತಿ ನೀಡಿದೆ.

ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ ಪ್ರತಿದಿನ ಹೆಚ್ಚುತ್ತಲೇ ಸಾಗಿದ್ದು, ಈ ವರೆಗೆಒಟ್ಟು 1,11,30,201ಜನರಿಗೆ ಕೋವಿಡ್‌–19 ತಗುಲಿದೆ. ಸುಮಾರು 60.02 ಲಕ್ಷ ಸೋಂಕಿತರು ಗುಣಮುಖರಾಗಿದ್ದು,5.26 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ.

ಅಮೆರಿಕ ಬಳಿಕ ಅತಿಹೆಚ್ಚು ಸೋಂಕು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿ ಬ್ರೆಜಿಲ್‌ ಇದೆ. ಈ ದೇಶದಲ್ಲಿ15,39,081 ಪ್ರಕರಣಗಳು ಬೆಳಕಿಗೆ ಬಂದಿದ್ದು, 9,84,615 ಸೋಂಕಿತರು ಗುಣಮುಖರಾಗಿದ್ದಾರೆ. 61,884ಜನರು ಸಾವಿಗೀಡಾಗಿದ್ದಾರೆ.

ADVERTISEMENT

ರಷ್ಯಾದಲ್ಲಿ 6,73,654, ಭಾರತದಲ್ಲಿ 6,48,315, ಸ್ಪೇನ್‌ನಲ್ಲಿ 2,50,545, ಪೆರುವಿನಲ್ಲಿ 2,95,599, ಚಿಲಿಯಲ್ಲಿ 2,88,089 ಇಂಗ್ಲೆಂಡ್‌ನಲ್ಲಿ 2,85,788 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಪಾಕಿಸ್ತಾನದಲ್ಲಿ 2,25,283 ಮಂದಿಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.