ADVERTISEMENT

Covid-19 World Update | ಬ್ರಿಟನ್‌ನಿಂದ ಕೋವಿಡ್ ರಿಕವರಿ ಪ್ಲಾನ್, ಮಿನಿ ಬಜೆಟ್

ಏಜೆನ್ಸೀಸ್
Published 8 ಜುಲೈ 2020, 16:57 IST
Last Updated 8 ಜುಲೈ 2020, 16:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್: ವಿಶ್ವಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ನಡುವೆಯೇ ಲಾಕ್‌ಡೌನ್‌ನಿಂದಾಗಿ ದೇಶಗಳ ವಾಣಿಜ್ಯ ಚಟುವಟಿಕೆಗಳಿಗೂ ಹೊಡೆತ ಬಿದ್ದಿವೆ. ಆರ್ಥಿಕತೆ ಚೇತರಿಕೆ ಕಾಣುತ್ತಿಲ್ಲ. ನಿರುದ್ಯೋಗ ಹೆಚ್ಚಾಗುತ್ತಿದೆ. ಇವುಗಳ ಪರಿಹಾರಕ್ಕಾಗಿ ಬ್ರಿಟನ್‌ ‘ಕೋವಿಡ್ ರಿಕವರಿ ಪ್ಲಾನ್’ ಹಮ್ಮಿಕೊಂಡಿದ್ದು, ಮಿನಿ ಬಜೆಟ್ ಘೋಷಿಸಿದೆ.

ಉದ್ಯೋಗದಾತರಿಗೆ ಬೋನಸ್, ಬಲವಂತದ ರಜೆಯಲ್ಲಿರುವ ಉದ್ಯೋಗಿಗಳನ್ನು ಮರಳಿ ಕೆಲಸಕ್ಕೆ ಕರೆಸಿಕೊಳ್ಳುವುದೂ ಸೇರಿದಂತೆ ಅನೇಕ ಯೋಜನೆಗಳ ಅನುಷ್ಠಾನಕ್ಕಾಗಿ ಬ್ರಿಟನ್ ಹಣಕಾಸು ಸಚಿವ ರಿಶಿ ಸುನಕ್ ಬಜೆಟ್ ಘೋಷಣೆ ಮಾಡಿದ್ದಾರೆ. ಬ್ರಿಟನ್‌ನಲ್ಲಿ ಈವರೆಗೆ 288,510 ಜನರಿಗೆ ಸೋಂಕು ತಗುಲಿದ್ದು, 44,602 ಮಂದಿ ಸಾವಿಗೀಡಾಗಿದ್ದಾರೆ.

ಜಾನ್ಸ್‌ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ, ಪಾಕಿಸ್ತಾನದಲ್ಲಿ ಒಂದೇ ದಿನ 2,980 ಹೊಸ ಪ್ರಕರಣಗಳು ದೃಢಪಟ್ಟಿವೆ. 83 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಅಲ್ಲಿ ಸೋಂಕಿತರ ಸಂಖ್ಯೆ 237,489ಕ್ಕೆ ಏರಿಕೆಯಾಗಿದೆ. ಪಂಜಾಬ್, ಸಿಂಧ್ ಪ್ರಾಂತ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 30 ಲಕ್ಷ ದಾಟಿದ್ದು, ಮೃತರ ಸಂಖ್ಯೆ 1.31 ಲಕ್ಷ ದಾಟಿದೆ. ಸೋಂಕಿನಿಂದಾಗಿ ಈವರೆಗೆ ಬ್ರೆಜಿಲ್‌ನಲ್ಲಿ 66,741, ರಷ್ಯಾದಲ್ಲಿ 10,650, ಪೆರುವಿನಲ್ಲಿ 10,952, ಚಿಲೆಯಲ್ಲಿ 6,434, ಮೆಕ್ಸಿಕೊ 32,014, ಸ್ಪೇನ್‌ 28,396, ಇರಾನ್ 12,084, ಇಟಲಿಯಲ್ಲಿ 34,914 ಮಂದಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.