ADVERTISEMENT

Covid-19 World update: ಬ್ರಿಟನ್, ಇಟಲಿಯಲ್ಲಿ ಮತ್ತೆ ಹೆಚ್ಚಿದ ಸೋಂಕು ಪ್ರಕರಣ

ಏಜೆನ್ಸೀಸ್
Published 13 ಅಕ್ಟೋಬರ್ 2020, 17:03 IST
Last Updated 13 ಅಕ್ಟೋಬರ್ 2020, 17:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಲಂಡನ್: ಬ್ರಿಟನ್‌ ಹಾಗೂ ಇಟಲಿಯಲ್ಲಿ ಮತ್ತೆ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ವರ್ಡೊ ಮೀಟರ್‌ ವೆಬ್‌ಸೈಟ್ ಮಾಹಿತಿ ಪ್ರಕಾರ, ಬ್ರಿಟನ್‌ನಲ್ಲಿ ಮಂಗಳವಾರ ಒಂದೇ ದಿನ 17,234 ಹೊಸ ಪ್ರಕರಣಗಳು ವರದಿಯಾಗಿದ್ದು, 143 ಮಂದಿ ಮೃತಪಟ್ಟಿದ್ದಾರೆ.

ಇದರೊಂದಿಗೆ ಬ್ರಿಟನ್‌ನಲ್ಲಿ ಈವರೆಗೆ ಸೋಂಕು ತಗುಲಿದವರ ಒಟ್ಟು ಸಂಖ್ಯೆ 6,34,920ಕ್ಕೆ ಏರಿಕೆಯಾಗಿದೆ. 43,018 ಮಂದಿ ಮೃತಪಟ್ಟಿದ್ದಾರೆ.

ಇಟಲಿಯಲ್ಲಿ ಒಂದೇ ದಿನ 5,901 ಹೊಸ ಪ್ರಕರಣಗಳು ವರದಿಯಾಗಿದ್ದು, 41 ಸಾವು ಸಂಭವಿಸಿದೆ. ಸೋಂಕು ಮೊದಲು ಪತ್ತೆಯಾಗಿದ್ದ ಚೀನಾದಲ್ಲಿಯೂ 13 ಹೊಸ ಪ್ರಕರಣಗಳು ದೃಢಪಟ್ಟಿವೆ.

ADVERTISEMENT

ಈವರೆಗೆ ವಿಶ್ವದಾದ್ಯಂತ 3.81 ಕೋಟಿಗೂ ಹೆಚ್ಚು ಜನ ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 10.87 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 2.86 ಕೋಟಿಗೂ ಹೆಚ್ಚು ಜನರು ಗುಣಮುಖರಾಗಿದ್ದಾರೆ. 84,17,137 ಸಕ್ರಿಯ ಪ್ರಕರಣಗಳಿವೆ.

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ ಒಟ್ಟು 80,49,854 ಮಂದಿಗೆ ಸೋಂಕು ದೃಢಪಟ್ಟಿದೆ. ಈವರೆಗೂ 2,20,281 ಮಂದಿ ಸಾವಿಗೀಡಾಗಿದ್ದಾರೆ. 51,97,125 ಸೋಂಕಿತರು ಈ ವರೆಗೆ ಚೇತರಿಸಿಕೊಂಡಿದ್ದಾರೆ.

ಸೋಂಕು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 72,05,923 ಪ್ರಕರಣಗಳು, ಬ್ರೆಜಿಲ್‌ನಲ್ಲಿ 51,03,408, ರಷ್ಯಾದಲ್ಲಿ 13,26,178, ಕೊಲಂಬಿಯಾದಲ್ಲಿ 9,19,083, ಪೆರುವಿನಲ್ಲಿ 8,51,171, ಬ್ರಿಟನ್‌ನಲ್ಲಿ 6,34,920, ಸ್ಪೇನ್‌ನಲ್ಲಿ 9,18,223 ಮತ್ತು ಮೆಕ್ಸಿಕೊದಲ್ಲಿ 8,21,045 ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.