ADVERTISEMENT

ಕೊರೊನಾ: ಭಾರತ, ಚೀನಾಗೆ ಹೋಗದಂತೆ ಅಮೆರಿಕ ಸೂಚನೆ

ಹಳೆಯ ಪ್ರಯಾಣ ಮಾರ್ಗ ಸೂಚಿ ಅನುಷ್ಠಾನ

ಪಿಟಿಐ
Published 7 ಆಗಸ್ಟ್ 2020, 14:41 IST
Last Updated 7 ಆಗಸ್ಟ್ 2020, 14:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್ : ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ, ಚೀನಾ ಸೇರಿದಂತೆ ಐವತ್ತು ರಾಷ್ಟ್ರಗಳಿಗೆ ಪ್ರಯಾಣ ಬೆಳೆಸದಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.

ಈ ಸಂಬಂಧ ಜಾರಿಗೊಳಿಸಿದ್ದ ಜಾಗತಿಕ ಪ್ರಯಾಣ ಮಾರ್ಗಸೂಚಿಯನ್ನು ರದ್ದುಗೊಳಿಸಿರುವ ಅಮೆರಿಕ, ಮಾರ್ಚ್ ತಿಂಗಳಲ್ಲಿ ಅನುಷ್ಠಾನಗೊಳಿಸಿದ್ದ ಹಳೆಯ ಮಾರ್ಗಸೂಚಿಯನ್ನೇ ಪುನಃ ಯಥಾವತ್ತು ಜಾರಿಗೊಳಿಸಿದೆ.

ಹಿಂದಿನ ಮಾರ್ಗಸೂಚಿಯಲ್ಲಿದ್ದ ಭಾರತ ಮತ್ತು ಚೀನಾ ಸೇರಿದಂತೆ ಐವತ್ತು ರಾಷ್ಟ್ರಗಳಿಗೆ ಪ್ರಯಾಣ ಮಾಡಬಾರದೆಂಬ ನಿರ್ಬಂಧನೆಯ ಅಂಶಗಳನ್ನುಈ ಮಾರ್ಗಸೂಚಿಯಲ್ಲಿ ಉಳಿಸಿಕೊಂಡಿದೆ.

ADVERTISEMENT

ಸೆಂಟರ್‌ ಫಾರ್‌ ಡೀಸಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್‌ ಸೊಸೈಟಿ ತಿಳಿಸಿರುವ ಸೂಚನೆಯಲ್ಲಿ ‘ಕೋವಿಡ್‌ 19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಜತೆಗೆ, ಭಯೋತ್ಪಾದನೆಯ ಭೀತಿ ಇರುವುದರಿಂದ, ಭಾರತಕ್ಕೆ ಪ್ರಯಾಣ ಬೆಳೆಸದಂತೆ‘ ಅಮೆರಿಕನ್ನರಿಗೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.