ADVERTISEMENT

Covid-19 World Update: ಜಗತ್ತಿನಾದ್ಯಂತ 8.39 ಕೋಟಿ ಪ್ರಕರಣಗಳು

ಏಜೆನ್ಸೀಸ್
Published 1 ಜನವರಿ 2021, 15:56 IST
Last Updated 1 ಜನವರಿ 2021, 15:56 IST
ರೋಮ್‌ನಲ್ಲಿ ವ್ಯಕ್ತಿಯೊಬ್ಬ ಜಾಗಿಂಗ್‌ ಮಾಡುತ್ತಿರುವುದು
ರೋಮ್‌ನಲ್ಲಿ ವ್ಯಕ್ತಿಯೊಬ್ಬ ಜಾಗಿಂಗ್‌ ಮಾಡುತ್ತಿರುವುದು   

ವಾಷಿಂಗ್ಟನ್‌: ಜಗತ್ತಿನಾದ್ಯಂತ ಈವರೆಗೂ ಒಟ್ಟು 8.39 ಕೋಟಿ ಜನರಿಗೆ ಕೋವಿಡ್‌–19 ದೃಢಪಟ್ಟಿದೆ. ಈ ಪೈಕಿ 5.94 ಕೋಟಿ ಸೋಂಕಿತರು ಗುಣಮುಖರಾಗಿದ್ದು, 18.28 ಲಕ್ಷ ಮಂದಿ ಮೃತಪಟ್ಟಿರುವುದಾಗಿ ವರ್ಲ್ಡೊ ಮೀಟರ್ ವೆಬ್‌ಸೈಟ್‌ ವರದಿ ಮಾಡಿದೆ.

ಒಟ್ಟಾರೆ 2.26 ಕೋಟಿಗೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 1.06 ಲಕ್ಷಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ.

2 ಕೋಟಿಗೂ ಹೆಚ್ಚು ಪ್ರಕರಣಗಳ ಮೂಲಕ ಅಮೆರಿಕ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಸೋಂಕಿನಿಂದ 3.54 ಲಕ್ಷ ಮಂದಿ ಸಾವಿಗೀಡಾಗಿದ್ದು, 79.78 ಲಕ್ಷ ಸಕ್ರಿಯ ಪ್ರಕರಣಗಳಿವೆ.

ADVERTISEMENT

ಅಮೆರಿಕದ ನಂತರದ ಸ್ಥಾನದಲ್ಲಿರುವ ಭಾರತದಲ್ಲಿ 1.02 ಕೋಟಿಗೂ ಅಧಿಕ ಪ್ರಕರಣಗಳು ವರದಿಯಾಗಿವೆ. ಬ್ರೆಜಿಲ್‌ನಲ್ಲಿ 76.75 ಲಕ್ಷ ಪ್ರಕರಣಗಳಿದ್ದು, 7.33 ಲಕ್ಷ ಸಕ್ರಿಯ ಪ್ರಕರಣಗಳಿವೆ. ಫ್ರಾನ್ಸ್‌ನಲ್ಲಿ 23.61 ಲಕ್ಷ ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.