ADVERTISEMENT

ಮೋದಿ ಸ್ವಾಗತಿಸಿ, ಕಾಲಿಗೆ ಬಿದ್ದ ಸೈಪ್ರಸ್‌ ಕೌನ್ಸಿಲ್‌ ಸದಸ್ಯೆ

ಪಿಟಿಐ
Published 16 ಜೂನ್ 2025, 15:16 IST
Last Updated 16 ಜೂನ್ 2025, 15:16 IST
<div class="paragraphs"><p>ಸೈಪ್ರಸ್‌ ಅಧ್ಯಕ್ಷ ನಿಕೋಸ್‌&nbsp;ಕ್ರಿಸ್ಟೊಡೌಲಿಡ್ಸ್‌ ಜೊತೆ ಪ್ರಧಾನಿ ನರೇಂದ್ರ ಮೋದಿ</p></div>

ಸೈಪ್ರಸ್‌ ಅಧ್ಯಕ್ಷ ನಿಕೋಸ್‌ ಕ್ರಿಸ್ಟೊಡೌಲಿಡ್ಸ್‌ ಜೊತೆ ಪ್ರಧಾನಿ ನರೇಂದ್ರ ಮೋದಿ

   

–ಪಿಟಿಐ ಚಿತ್ರ

ನಿಕೋಷಿಯಾ: ಸೈಪ್ರಸ್‌ ದೇಶದ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ ಇಲ್ಲಿನ ಕೌನ್ಸಿಲ್‌ನ ಸದಸ್ಯೆಯೊಬ್ಬರು ನಂತರ ಕಾಲಿಗೆರಗಿ ನಮಸ್ಕರಿಸಿದ್ದಾರೆ. ಈ ವೇಳೆ ಸೈಪ್ರಸ್‌ ಅಧ್ಯಕ್ಷ ನಿಕೋಸ್‌ ಕ್ರಿಸ್ಟೊಡೌಲಿಡ್ಸ್‌ ಹಾಜರಿದ್ದರು.

ADVERTISEMENT

ಮೋದಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದ ನಿಕೋಷಿಯಾದ ಕೌನ್ಸಿಲ್‌ ಸದಸ್ಯೆ ಮೈಕೆಲಾ ಕಿಥ್ರೊಟಿ ಅವರು ನಂತರ ಕಾಲಿಗೆರಗಿ ನಮಸ್ಕರಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಸದಸ್ಯೆಯು ನಮಸ್ಕರಿಸುವುದನ್ನು ವಿನಮ್ರವಾಗಿ ಸ್ವೀಕರಿಸಿದ ಪ್ರಧಾನಿ, ಇಡೀ ವಿಶ್ವದಲ್ಲಿಯೇ ಎಲ್ಲ ರಾಷ್ಟ್ರಗಳೊಂದಿಗೆ ಭಾರತವು ಆಳವಾದ ಸಾಂಸ್ಕೃತಿಕ ನಂಟು ಹೊಂದಿರುವುದನ್ನು ಸೂಚಿಸುತ್ತದೆ’ ಎಂದರು.

ಇದು ಯುದ್ಧದ ಸಮಯವಲ್ಲ–ಮೋದಿ: ‘ಪಶ್ಚಿಮ ಏಷ್ಯಾ– ಯುರೋಪ್‌ನಲ್ಲಿ ಈಗ ನಡೆಯುತ್ತಿರುವ ಸಂಘರ್ಷದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಈಗ ಯುದ್ಧದ ಸಮಯವಲ್ಲ ಎಂಬುದನ್ನು ಇಬ್ಬರು ನಾಯಕರು ಒಪ್ಪಿಕೊಂಡಿದ್ದೇವೆ‘ ಎಂದರು.

ಸೈಪ್ರಸ್‌ ಅಧ್ಯಕ್ಷ ನಿಕೋಸ್‌ ಕ್ರಿಸ್ಟೊಡೌಲಿಡ್ಸ್‌ ಜೊತೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,‘ಮಾನವೀಯತೆ ದೃಷ್ಟಿಯಿಂದ ಮಾತುಕತೆ ಮೂಲಕ ಸ್ಥಿರತೆ ಹಾಗೂ ಶಾಂತಿ ಸ್ಥಾಪಿಸಲು ಶ್ರಮಿಸಬೇಕು’ ಎಂದು ಕರೆ ನೀಡಿದರು.

ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಸೈಪ್ರಸ್‌ಗೆ ಮೋದಿ ಧನ್ಯವಾದ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.