ಪ್ಯಾರಿಸ್: ಸಾಮಾಜಿಕ ಜಾಲತಾಣ ಫೇಸ್ಬುಕ್ನ 5 ಕೋಟಿ ಖಾತೆಗಳು ಹ್ಯಾಕ್ ಆಗಿರುವುದನ್ನು ಎಂಜಿನಿಯರ್ಗಳು ಪತ್ತೆ ಹಚ್ಚಿದ್ದು, ಸಮಸ್ಯೆ ಸರಿಪಡಿಸಲಾಗಿದೆ ಎಂದು ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ಹೇಳಿದ್ದಾರೆ.
‘ಹ್ಯಾಕ್ ಆದ ಖಾತೆಗಳನ್ನು ಮರುಹೊಂದಿಸಿದ್ದೇವೆ. ಬಳಕೆದಾರರು ಪಾಸ್ವರ್ಡ್ ಮೂಲಕ ಮತ್ತೆ ಲಾಗಿನ್ ಆಗಬೇಕು. ಮುಂಜಾಗ್ರತಾ ಕ್ರಮವಾಗಿ ಇನ್ನೂ 4 ಕೋಟಿ ಬಳಕೆದಾರರಿಗೆ ಆಕ್ಸಸ್ಟೋಕನ್ (ಡಿಜಿಟಲ್ ಕೀಲಿಕೈ) ಒದಗಿಸಲಾಗುವುದು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.