ADVERTISEMENT

ಅಮೆರಿಕ: ಬಿಸಿಗಾಳಿಯಿಂದ ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ

ಏಜೆನ್ಸೀಸ್
Published 3 ಜುಲೈ 2021, 5:43 IST
Last Updated 3 ಜುಲೈ 2021, 5:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಯಾಟಲ್: ಕಳೆದ ವಾರದಿಂದ ವಾಯವ್ಯ ಪೆಸಿಫಿಕ್‌ ಪ್ರದೇಶದಲ್ಲಿ ತಾಪಮಾನ ಹೆಚ್ಚುತ್ತಿರುವ ಕಾರಣ ಬಿಸಿ ಗಾಳಿ ಬೀಸುತ್ತಿದೆ. ದಿನೇ ದಿನೇ ಮೃತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದಕ್ಕೆ ಈ ನೈಸರ್ಗಿಕ ವಿದ್ಯಮಾನವೇ ಕಾರಣ ಎಂದು ಹೇಳಲಾಗುತ್ತಿದೆ.

ಒರೆಗಾನ್, ವಾಷಿಂಗ್ಟನ್ ಮತ್ತು ಬ್ರಿಟಿಷ್ ಕೊಲಂಬಿಯಾದಲ್ಲಿ ನೂರಾರು ಜನರು ಮೃತಪಟ್ಟಿದ್ಧಾರೆ. ಇವರ ಸಾವಿಗೆ ಅಧಿಕ ತಾಪಮಾನವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

ಜೂನ್‌ 25ರಿಂದ ಹಲವೆಡೆ ಅಪಾಯಕಾರಿ ಮಟ್ಟದಲ್ಲಿ ತಾಪಮಾನವು ಹೆಚ್ಚಾಗಿದೆ. ಆದರೆ ಮಂಗಳವಾರ ಕೆಲವು ಪ್ರದೇಶಗಳಲ್ಲಿ ತಾಪಮಾನ ಸ್ವಲ್ಪ ಕಡಿಮೆ ದಾಖಲಾಗಿತ್ತು. ಒರೆಗಾನ್‌ನಲ್ಲಿ ತಾಪಮಾನ ಹೆಚ್ಚಳದಿಂದಾಗಿ ಮೃತಪಟ್ಟವರ ಸಂಖ್ಯೆ 95ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ಪರೀಕ್ಷಕರು ಹೇಳಿದ್ದಾರೆ. ಪೋರ್ಟ್‌ಲ್ಯಾಂಡ್‌ನ ಮಲ್ಟ್‌ನೋಮಾ ಕೌಂಟಿಯಲ್ಲಿ ಅತಿ ಹೆಚ್ಚು ಸಾವು ಸಂಭವಿಸಿವೆ ಎಂದು ಇವೇ ಮೂಲಗಳು ಹೇಳಿವೆ.

ADVERTISEMENT

‘ವಾಷಿಂಗ್ಟನ್‌ನಲ್ಲಿ ಅಧಿಕ ತಾಪಮಾನದಿಂದಾಗಿ 30 ಜನರು ಮೃತಪಟ್ಟಿದ್ದಾರೆ. ಈ ವಾರ ಸಾವಿನ ಸಂಖ್ಯೆ ಮತ್ತಷ್ಟೂ ಹೆಚ್ಚಾಗುವ ಸಾಧ್ಯತೆಯಿದೆ’ ಎಂದು ಅಲ್ಲಿನ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.