ADVERTISEMENT

ಸಿರಿಯಾ ಸಂಘರ್ಷಕ್ಕೆ ಹತ್ತು ವರ್ಷಗಳಲ್ಲಿ 5 ಲಕ್ಷ ಮಂದಿ ಬಲಿ

ಏಜೆನ್ಸೀಸ್
Published 1 ಜೂನ್ 2021, 8:36 IST
Last Updated 1 ಜೂನ್ 2021, 8:36 IST
ಸಿರಿಯಾದಲ್ಲಿ ಸಂಭವಿಸಿದ ಬಾಂಬ್‌ ದಾಳಿಯ ಪ್ರಾತಿನಿಧಿಕ ಚಿತ್ರ (ಎಎಫ್‌ಪಿ)
ಸಿರಿಯಾದಲ್ಲಿ ಸಂಭವಿಸಿದ ಬಾಂಬ್‌ ದಾಳಿಯ ಪ್ರಾತಿನಿಧಿಕ ಚಿತ್ರ (ಎಎಫ್‌ಪಿ)    

ಬೈರೂತ್‌: ಸಿರಿಯಾದಲ್ಲಿ ದಶಕ ಕಾಲ ನಡೆದ ಯುದ್ಧದಲ್ಲಿ ಸರಿಸುಮಾರು 5 ಲಕ್ಷ ಮಂದಿ ಮರಣ ಹೊಂದಿದ್ದಾರೆ. ಕೇವಲ ಇತ್ತೀಚಿನ ದಿನಗಳಲ್ಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ಸಂಘರ್ಷಕ್ಕೆ ಬಲಿಯಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಮಾನವ ಹಕ್ಕುಗಳ ಮೇಲೆ ನಿಗಾವಹಿಸುವ ಬ್ರಿಟನ್‌ ಮೂಲದ, ಸಿರಿಯಾ ಪ್ರಾಂತೀಯ ವೀಕ್ಷಕ ಸಂಸ್ಥೆಯು ಜೀವ ನಷ್ಟದ ಲೆಕ್ಕ ಮಾಡಿದೆ. 2011ರಲ್ಲಿ ಸರ್ಕಾರದ ವಿರುದ್ಧ ಬಂಡೆದ್ದವರ ಕ್ರೂರ ದಬ್ಬಾಳಿಕೆಯಿಂದಾಗಿ ಈ ವರೆಗೆ 494,438ಮಂದಿಸಾವಿಗೀಡಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಮಾರ್ಚ್‌ನಲ್ಲಿ ಸಂಸ್ಥೆ ಬಿಡುಗಡೆ ಮಾಡಿದ್ದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆಯು388,000ಆಗಿತ್ತು.ಆದರೆ, ಇತ್ತೀಚಿಗೆ ಲಭ್ಯವಾದ ದಾಖಲೆ, ಪತ್ರಗಳನ್ನು ಅಧ್ಯಯನ ಮಾಡಿರುವ ಸಂಸ್ಥೆಯು 1,05,015 ಸಾವುಗಳನ್ನು ಖಚಿತಪಡಿಸಿದೆ. ಅದರೊಂದಿಗೆ ಒಟ್ಟುಸಾವಿನ ಸಂಖ್ಯೆ ಹೆಚ್ಚು ಕಡಿಮೆ 5 ಲಕ್ಷ ಸಮೀಪಿಸಿದೆ.

ADVERTISEMENT

‘ಈ ಸಾವುಗಳಲ್ಲಿ ಹೆಚ್ಚಿನವು 2012ರ ಅಂತ್ಯದಿಂದ 2015ರ ನವೆಂಬರ್ ನಡುವೆ ಸಂಭವಿಸಿವೆ" ಎಂದು ಸಂಸ್ಥೆಯ ಮುಖ್ಯಸ್ಥ ರಾಮಿ ಅಬ್ದುಲ್‌ ರಹಮಾನ್ ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.