ADVERTISEMENT

ಸ್ಪರ್ಧೆ ಮರುಪರಿಶೀಲಿಸುವಂತೆ ಬೈಡನ್‌ಗೆ ಸ್ವಪಕ್ಷೀಯರ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 11:34 IST
Last Updated 18 ಜುಲೈ 2024, 11:34 IST
ಜೋ ಬೈಡನ್
ಜೋ ಬೈಡನ್   

ಮಿಲ್ವಾಕೀ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮತ್ತೊಮ್ಮೆ ಯೋಚಿಸುವಂತೆ ಡೆಮಾಕ್ರಟಿಕ್‌ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಮನವಿ ಮಾಡಿದ್ದಾರೆ.

ಅದರಲ್ಲೂ, ಈಗ ಅವರಿಗೆ ಕೋವಿಡ್‌–19 ದೃಢಪಟ್ಟಿದೆ. ಹೀಗಾಗಿ, ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಮರುಪರಿಶೀಲಿಸುವುದು ಉತ್ತಮ ಎಂಬ ಸಲಹೆಯನ್ನೂ ನೀಡುತ್ತಿದ್ದಾರೆ.

ಆದರೆ, ಸ್ಪರ್ಧಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿರುವ ಬೈಡನ್, ಈ ಬಾರಿಯೂ ರಿಪಬ್ಲಿಕನ್‌ ಪಕ್ಷದ ಹುರಿಯಾಳು ಡೊನಾಲ್ಡ್ ಟ್ರಂಪ್‌ ಅವರನ್ನು ಸೋಲಿಸುವುದಾಗಿ ಹೇಳುತ್ತಿದ್ದಾರೆ.

ADVERTISEMENT

ಬೈಡನ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಡೆಮಾಕ್ರಟಿಕ್‌ ಪಕ್ಷದ ಪ್ರಮುಖ ನಾಯಕರು ಖಾಸಗಿಯಾಗಿ ಆತಂಕ ವ್ಯಕ್ತಪಡಿಸುತ್ತಿದ್ದರೆ, ಕೆಲವರು ಬಹಿರಂಗವಾಗಿಯೇ ಕಳವಳ  ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯ ಕಣಕ್ಕಿಳಿಯಬೇಕೇ ಬೇಡವೇ  ಎಂಬುದರ ಕುರಿತು ಬೈಡನ್‌ ಅವರು ಬರುವ ದಿನಗಳಲ್ಲಿ ಆಲೋಚನೆ ಮಾಡಲಿದ್ದಾರೆ ಎಂದು ಇನ್ನೂ ಕೆಲ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷದ ಸಂಸದರಾದ ಚುಕ್‌ ಶೂಮರ್ ಹಾಗೂ ಹಕೀಮ್‌ ಜೆಫ್ರೀಸ್‌ ಅವರು ಇತ್ತೀಚೆಗೆ ಬೈಡನ್‌ ಅವರಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ, ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಂಬಂಧಿಸಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿನ ಆತಂಕವನ್ನು ವಿವರಿಸಿದ್ದಾರೆ.

ಪಕ್ಷದ ಚುನಾವಣಾ ಸಮಿತಿ ಅಧ್ಯಕ್ಷರಾದ ಸುಜಾನ್ ಡೆಲ್‌ಬೆನೆ ಅವರು ಸಹ, ಚುನಾವಣೆಗೆ ಸಂಬಂಧಿಸಿದ ದತ್ತಾಂಶಗಳು, ಪಕ್ಷದ ವೇದಿಕೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಬೈಡನ್‌ ಅವರಿಗೆ ವಿವರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.