ADVERTISEMENT

ಚೀನಾ: ದೇಶಿ ವಿಮಾನಗಳ ಹಾರಾಟ ಆರಂಭ

ಏಜೆನ್ಸೀಸ್
Published 13 ಸೆಪ್ಟೆಂಬರ್ 2020, 6:40 IST
Last Updated 13 ಸೆಪ್ಟೆಂಬರ್ 2020, 6:40 IST
ಚೀನಾ ವಿಮಾನ ಪ್ರಯಾಣ– ಪ್ರಾತಿನಿಧಿಕ ಚಿತ್ರ
ಚೀನಾ ವಿಮಾನ ಪ್ರಯಾಣ– ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌: ಕೊರೊನಾ ವೈರಸ್‌ ಮೊದಲು ಕಾಣಿಸಿಕೊಂಡಿದ್ದ ಚೀನಾದ ವುಹಾನ್‌ ನಗರದಲ್ಲಿ ಪರಿಸ್ಥಿತಿಯು ಸಾಮಾನ್ಯ ಸ್ಥಿತಿಗೆ ಮರಳಿದ್ದು, ಮೊದಲಿನಂತೆಯೇ ದೇಶಿಯ ವಿಮಾನಗಳು ಹಾರಾಟ ನಡೆಸುತ್ತಿವೆ.

ಚೀನಾದಲ್ಲಿ76 ದಿನಗಳ ಲಾಕ್‌ಡೌನ್‌ ಹೇರಲಾಗಿತ್ತು. ಆ ಬಳಿಕ ಏಪ್ರಿಲ್‌ನಲ್ಲಿ ದೇಶಿಯ ವಿಮಾನ ಹಾರಾಟ ಆರಂಭವಾಗಿತ್ತು. ಆದರೆ, ಅತಿ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದರು. ಈಗ ಮೊದಲಿನಂತೆ ಸಹಜ ಸ್ಥಿತಿಗೆ ಮರಳಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಶುಕ್ರವಾರ 500 ವಿಮಾನಗಳಲ್ಲಿ ಒಟ್ಟು 64,700 ಪ್ರಯಾಣಿಕರು ಸಂಚರಿಸಿದ್ದಾರೆ ಎಂದುವುಹಾನ್ ಟಿಯಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿದ್ದಾರೆ

‘ಅಂತರರಾಷ್ಟ್ರೀಯ ವಿಮಾನಗಳ ಸಂಚಾರ ಆರಂಭಿಸಲು ಸಿದ್ಧತೆಗಳನ್ನು ನಡೆಸುತ್ತಿದ್ದೇವೆ. ಶೀಘ್ರ ಸೋಲ್, ಸಿಂಗಾಪುರ, ಕ್ವಾಲಾಲಂಪುರ ಮತ್ತು ಜಕಾರ್ತಗೆ ವಿಮಾನಗಳು ಮತ್ತೆ ಹಾರಾಟ ನಡೆಸಲಿವೆ’ ಎಂದು ತಿಳಿಸಿದ್ದಾರೆ.

ADVERTISEMENT

ಈಗಾಗಲೇ ಚೀನಾವುಆಮ್‌ಸ್ಟರ್‌ ಡ್ಯಾಮ್ ಮತ್ತು ನವದೆಹಲಿಗೆ ಅಂತರರಾಷ್ಟ್ರೀಯ ಕಾರ್ಗೋ ಸೇವೆ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.