ADVERTISEMENT

ಕಾಬೂಲ್‌: ಇಂದಿನಿಂದ ದೇಶೀಯ ವಿಮಾನ ಸೇವೆ ಆರಂಭ

ರಾಯಿಟರ್ಸ್
Published 2 ಸೆಪ್ಟೆಂಬರ್ 2021, 20:37 IST
Last Updated 2 ಸೆಪ್ಟೆಂಬರ್ 2021, 20:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ: ಕಾಬೂಲ್‌ ವಿಮಾನ ನಿಲ್ದಾಣದಿಂದ ದೇಶೀಯ ವಿಮಾನಗಳ ಸೇವೆ ಶುಕ್ರವಾರದಿಂದ ಪುನರಾರಂಭಗೊಳ್ಳಲಿದೆ ಎಂದು ದೋಹಾ ಮೂಲದ ಅಲ್‌ ಜಜೀರಾ ವಾಹಿನಿ ಗುರುವಾರ ವರದಿ ಮಾಡಿದೆ.

ಅಂತರರಾಷ್ಟ್ರೀಯ ವಿಮಾನಗಳ ಸೇವೆ ಇನ್ನೂ ಸಮಯ ತೆಗೆದುಕೊಳ್ಳುತ್ತದೆ ಎಂದು ಅಫ್ಗನ್‌ ನಾಗರಿಕ ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವಾಹಿನಿ ಹೇಳಿದೆ.

ಕತಾರ್‌ ತಾಂತ್ರಿಕ ತಂಡವು ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಿ ಶೀಘ್ರ ಕಾರ್ಯಾಚರಣೆಗೆ ಅಣಿಗೊಳಿಸುವ ಯೋಜನೆಯನ್ನು ಹೊಂದಿದೆ ಎಂದು ಅಲ್‌ ಜಜೀರಾ ಈ ಹಿಂದೆ ವರದಿ ಮಾಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.