ADVERTISEMENT

‘ವಾಲ್‌ ಸ್ಟ್ರೀಟ್‌ ಜರ್ನಲ್’ ವಿರುದ್ಧ ಡೊನಾಲ್ಡ್ ಟ್ರಂಪ್‌ ದಾವೆ

ಏಜೆನ್ಸೀಸ್
Published 19 ಜುಲೈ 2025, 13:48 IST
Last Updated 19 ಜುಲೈ 2025, 13:48 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್

ವಾಷಿಂಗ್ಟನ್: ತಮ್ಮ ಬಗ್ಗೆ ಮಾನಹಾನಿಕರ ವರದಿ ಪ್ರಕಟಿಸಿದ ‘ದಿ ವಾಲ್‌ ಸ್ಟ್ರೀಟ್‌ ಜರ್ನಲ್’ ಪತ್ರಿಕೆ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು 10 ಬಿಲಿಯನ್ ಡಾಲರ್‌ (ಸುಮಾರು ₹86,187 ಕೋಟಿ) ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ADVERTISEMENT

ಲೈಂಗಿಕವಾಗಿ ಬಳಸಿಕೊಳ್ಳಲು ಹೆಣ್ಣುಮಕ್ಕಳನ್ನು, ಮಹಿಳೆಯರನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪ ಹೊತ್ತಿದ್ದ ಫೈನಾನ್ಶಿಯರ್‌ ಜೆಫ್ರಿ ಎಪ್‌ಸ್ಟೀನ್ ಅವರೊಂದಿಗೆ ಟ್ರಂಪ್‌ ಅವರಿಗೆ ಸಂಪರ್ಕ ಇತ್ತು ಎಂದು ‘ದಿ ವಾಲ್‌ ಸ್ಟ್ರೀಟ್‌ ಜರ್ನಲ್’ ಪತ್ರಿಕೆ ವರದಿ ಪ್ರಕಟಿಸಿತ್ತು.

ಪತ್ರಿಕೆ ಜೊತೆಯಲ್ಲಿ ಮಾಧ್ಯಮ ಕ್ಷೇತ್ರದ ದೈತ್ಯ ರೂಪರ್ಟ್‌ ಮರ್ಡೋಕ್‌ ಅವರ ಮೇಲೆಯೂ ದಾವೆ ಹೂಡಿದ್ದಾರೆ. ‘ಜೆಫ್ರಿ ಎಪ್‌ಸ್ಟೀನ್ ಅವರ ಪ್ರಕರಣದ ದಾಖಲೆಗಳನ್ನು ಬಿಡುಗಡೆ ಮಾಡಬೇಕು’ ಎಂದು ಕೋರಿ ನ್ಯಾಯಾಂಗ ಇಲಾಖೆಯು ಫೆಡರಲ್‌ ನ್ಯಾಯಾಲಯವನ್ನು ಶುಕ್ರವಾರವಷ್ಟೇ ಕೋರಿತ್ತು. ಈ ಬಳಿಕ ಈ ಬೆಳವಣಿಗೆ ನಡೆದಿದೆ.

ಜೆಫ್ರಿ ಎಪ್‌ಸ್ಟೀನ್ ಅವರ ಹುಟ್ಟುಹಬ್ಬದಂದು ಟ್ರಂಪ್ ಅವರು ಜೆಫ್ರಿ ಅವರಿಗೆ ಲೈಂಗಿಕ ದ್ವಂದ್ವಾರ್ಥ ಮೂಡಿಸುವ ಪತ್ರವೊಂದನ್ನು ಬರೆದಿದ್ದರ ಬಗ್ಗೆ ಪತ್ರಿಕೆ ವರದಿ ಪ್ರಕಟಿಸಿದೆ. ‘ಈ ಪತ್ರವನ್ನು ನಾನು ಬರೆದಿಲ್ಲ’ ಎಂಬುದು ಟ್ರಂಪ್‌ ಅವರ ವಾದ. ‘ಸುಳ್ಳಿನ, ದುರುದ್ದೇಶಪೂರಿತ ಮತ್ತು ಅವಮಾನಕರವಾದ ವರದಿಯನ್ನು ಪ್ರಕಟಿಸಲಾಗಿದೆ’ ಎಂದು ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.