ADVERTISEMENT

2016ರ ಅಧ್ಯಕ್ಷೀಯ ಚುನಾವಣೆ: ದಾಖಲೆಗಳ ಬಹಿರಂಗಕ್ಕೆ ಟ್ರಂಪ್‌ ಆದೇಶ

ಪಿಟಿಐ
Published 7 ಅಕ್ಟೋಬರ್ 2020, 8:16 IST
Last Updated 7 ಅಕ್ಟೋಬರ್ 2020, 8:16 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: 2016ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ನಡೆಸಿದೆ ಎನ್ನಲಾದ ಕುರಿತು ಎಲ್ಲ ದಾಖಲೆಗಳನ್ನು ಬಹಿರಂಗಗೊಳಿಸುವಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶ ನೀಡಿದ್ದಾರೆ.

‘ಎಲ್ಲ ದಾಖಲೆಗಳನ್ನು ಬಹಿರಂಗಗೊಳಿಸಲು ಆದೇಶ ನೀಡಲಾಗಿದೆ. ಅಮೆರಿಕದ ಇತಿಹಾಸದಲ್ಲಿ ಇದೊಂದು ಏಕೈಕ ದೊಡ್ಡ ರಾಜಕೀಯ ಅಪರಾಧವಾಗಿತ್ತು. ಇದು ಹಿಲರಿ ಕ್ಲಿಂಟನ್‌ ಇ–ಮೇಲ್‌ ಹಗರಣದ ರೀತಿಯಲ್ಲಿದೆ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ರಾಷ್ಟ್ರೀಯ ಬೇಹುಗಾರಿಕೆ ಇಲಾಖೆ ನಿರ್ದೇಶಕರು ಕೆಲವು ದಾಖಲೆಗಳನ್ನು ಬಹಿರಂಗಪಡಿಸಿದ ಬಳಿಕ ಟ್ರಂಪ್‌ ಈ ಆದೇಶ ಹೊರಡಿಸಿದ್ದಾರೆ.

ADVERTISEMENT

‘2016ರ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್‌ ಅವರ ಯೋಜನೆಗಳ ಕುರಿತು ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರಿಗೆಸಿಐಎ ಮಾಜಿ ನಿರ್ದೇಶಕ ಜಾನ್‌ ಬ್ರೆನ್ನನ್‌ ಅವರು ವಿವರಿಸಿದ್ದರು ಎನ್ನುವ ಅಂಶಗಳು ಕೈಯಲ್ಲಿ ಬರೆದಿರುವ ದಾಖಲೆಗಳು ಬಹಿರಂಗಪಡಿಸಿವೆ’ ಎಂದು ಫಾಕ್ಸ್‌ ನ್ಯೂಸ್‌ ವರದಿ ಮಾಡಿದೆ.

’2016ರ ಚುನಾವಣೆ ಸಂದರ್ಭದಲ್ಲಿ ರಷ್ಯಾ ಜತೆ ಡೊನಾಲ್ಡ್‌ ಟ್ರಂಪ್‌ ಸಂಪರ್ಕ ಹೊಂದಿದ್ದಾರೆ ಎನ್ನುವುದನ್ನು ಬಿಂಬಿಸಲು ಹಿಲರಿ ಕ್ಲಿಂಟನ್‌ ಯೋಜನೆ ರೂಪಿಸಿದ್ದರು. ಈ ಮೂಲಕ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಿದ್ದರು’ ಎಂದು ಟ್ರಂಪ್‌ ಅವರ ಸಂವಹನ ನಿರ್ದೇಶಕ ಟಿಮ್‌ ಮರ್ಟೌಘ್‌ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.