ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ‘ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಒಂಬತ್ತು ತಿಂಗಳು ಕಳೆದು ಮರಳಿದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಅಮೆರಿಕದ ಬುಚ್ ವಿಲ್ಮೋರ್ ಅವರಿಗೆ ‘ಹೆಚ್ಚುವರಿ ಕೆಲಸದ ಅವಧಿಗೆ ಕಿಸೆಯಿಂದ ಹಣ ಪಾವತಿಸಲು ಸಿದ್ಧ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಗಗನಯಾನಿಗಳು ಬಾಹ್ಯಾಕಾಶ ಕೇಂದ್ರದಲ್ಲಿ ಇದ್ದ ಹೆಚ್ಚುವರಿ ಅವಧಿಗೆ ವೇತನ ಕುರಿತ ಪತ್ರಕರ್ತರ ಪ್ರಶ್ನೆಗೆ, ‘ಈ ಬಗ್ಗೆ ಯಾರೂ ನನಗೆ ಹೇಳಿರಲಿಲ್ಲ. ಅಗತ್ಯಬಿದ್ದರೆ, ನಾನೇ ಜೇಬಿನಿಂದಲೇ ಪಾವತಿಸಲು ಸಿದ್ಧ’ ಎಂದರು.
ಇಬ್ಬರು ಗಗನಯಾನಿಗಳಿಗೆ ನಾಸಾ 1,52,258 ಡಾಲರ್ ವಾರ್ಷಿಕ ವೇತನ (₹1.30 ಕೋಟಿ) ಪಾವತಿಸುತ್ತದೆ. ನಿಗದಿತ ಅವಧಿ ಮೀರಿ ಕಳೆದ 286 ದಿನಗಳಿಗೆ ಹೆಚ್ಚುವರಿಯಾಗಿ 1,430 ಡಾಲರ್ (₹1.22 ಲಕ್ಷ) ನೀಡಲಿದೆ.
ಇದೇ ವೇಳೆ ಟ್ರಂಪ್ ಅವರು, ಗಗನಯಾನಿಗಳನ್ನು ಸ್ಪೇಸ್ ಎಕ್ಸ್ ಡ್ರ್ಯಾಗನ್ ಕ್ಯಾಪ್ಸೂಲ್‌ನಲ್ಲಿ ಕರೆತರಲು ಕ್ರಮವಹಿಸಿದ್ದ ಟೆಸ್ಲಾ ಸಂಸ್ಥೆ ಮುಖ್ಯಸ್ಥ ಎಲಾನ್ ಮಸ್ಕ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಗಗನಯಾನಿಗಳನ್ನು ಕರೆತರಲು ಯಾರು ಹೋಗುತ್ತಿದ್ದರು. ಮಸ್ಕ್ ಇಲ್ಲದಿದ್ದರೆ ಬಹುಶಃ ಗಗನಯಾನಿಗಳು ಸುದೀರ್ಘ ಅವಧಿ ಅಲ್ಲಿಯೇ ಉಳಿಯಬೇಕಾಗಿತ್ತು ಎಂದು ಟ್ರಂಪ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.