ADVERTISEMENT

ತಮಾಷೆ ಮಾಡುತ್ತಿಲ್ಲ..: ಮೂರನೇ ಅವಧಿಗೂ ಅಧ್ಯಕ್ಷನಾಗಲು ಟ್ರಂಪ್‌ ಇಂಗಿತ

ಏಜೆನ್ಸೀಸ್
Published 31 ಮಾರ್ಚ್ 2025, 4:12 IST
Last Updated 31 ಮಾರ್ಚ್ 2025, 4:12 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಅಮೆರಿಕದ ಸಂವಿಧಾನದ 22ನೇ ತಿದ್ದುಪಡಿಯು ಒಬ್ಬ ವ್ಯಕ್ತಿಗೆ ಎರಡು ಅವಧಿಗೆ ಮಾತ್ರ ಅಧ್ಯಕ್ಷನಾಗಿ ಮುಂದುವರಿಯುವ ಅವಕಾಶ ನೀಡಿದೆ. ಹೀಗಿದ್ದರೂ ಮೂರನೇ ಅವಧಿಗೆ ಅಧ್ಯಕ್ಷನಾಗುವ ಬಗ್ಗೆ ಡೊನಾಲ್ಡ್ ಟ್ರಂಪ್‌ ಅವರು ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಎನ್‌ಬಿಸಿ ಸುದ್ದಿವಾಹಿನಿಯ ಕ್ರಿಸ್ಟನ್ ವೆಲ್ಕರ್ ಅವರೊಂದಿಗಿನ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್‌, ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.

ಇನ್ನೊಂದು ಅವಧಿಗೆ ಮುಂದುವರಿಯಲು ಬಯಸುತ್ತೀರಾ ಎಂದು ಕೇಳಿದಾಗ, ‘ಕೆಲಸ ಮಾಡಲು ನನಗೆ ಇಷ್ಟ... ತಮಾಷೆ ಮಾಡುತ್ತಿಲ್ಲ’ ಎಂದು ಉತ್ತರಿಸಿದ್ದಾರೆ.

ADVERTISEMENT

‘ಮೂರನೇ ಅವಧಿಗೂ ನಾನೇ ಅಧ್ಯಕ್ಷನಾಗಬೇಕೆಂದು ಬಹಳಷ್ಟು ಜನರು ಬಯಸುತ್ತಿದ್ದಾರೆ. ಅದಕ್ಕಾಗಿ ನಾವು ಬಹಳ ದೂರ ಕ್ರಮಿಸಬೇಕಿದೆ’ ಎಂದಿದ್ದಾರೆ.

ಮೂರನೇ ಅವಧಿಗೆ ಆಯ್ಕೆಯಾಗಲು ಅವಕಾಶ ನೀಡುವ ಮಾರ್ಗೋಪಾಯಗಳ ಬಗ್ಗೆ ನಿಮ್ಮೊಂದಿಗೆ ಚರ್ಚಿಸಲಾಗಿದೆಯೇ ಎಂಬ ಪ್ರಶ್ನೆಗೆ, ಅದಕ್ಕೆ ಹಲವು ವಿಧಾನಗಳಿಗೆ ಎಂದು ಹೇಳಿದ್ದಾರೆ.

ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಚುನಾವಣೆಗೆ ಸ್ಪರ್ಧಿಸಿ ನಂತರ ಆ ಸ್ಥಾನವನ್ನು ನಿಮಗೆ ಬಿಟ್ಟುಕೊಡುವ ಸಾಧ್ಯತೆಯಿದೆಯೇ ಎಂದು ಕೇಳಿದಾಗ, ಅದು ಒಂದು ವಿಧಾನ ಎಂದಷ್ಟೇ ಉತ್ತರಿಸಿದ್ದಾರೆ.

ಇನ್ನೊಂದು ವಿಧಾನ ಯಾವುದು ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ್ದಾರೆ.

ಅಮೆರಿಕ ಸಂವಿಧಾನದ 22ನೇ ತಿದ್ದುಪಡಿಯು ಅಧ್ಯಕ್ಷೀಯ ಅವಧಿಯ ಮಿತಿಗಳನ್ನು ನಿಗದಿಪಡಿಸುತ್ತದೆ. ಯಾವುದೇ ವ್ಯಕ್ತಿಯನ್ನು ಎರಡು ಬಾರಿಗಿಂತ ಹೆಚ್ಚು ಬಾರಿ ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಬಾರದು ಎಂದು ತಿಳಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.