ADVERTISEMENT

ಮಸ್ಕ್‌ ಅಭಿವೃದ್ಧಿ ಬಯಸುವೆ: ಡೊನಾಲ್ಡ್‌ ಟ್ರಂಪ್‌

ರಾಯಿಟರ್ಸ್
Published 24 ಜುಲೈ 2025, 16:02 IST
Last Updated 24 ಜುಲೈ 2025, 16:02 IST
ಟ್ರಂಪ್‌
ಟ್ರಂಪ್‌   

ನ್ಯೂಯಾರ್ಕ್: ಫೆಡರಲ್‌ ಸಬ್ಸಿಡಿಗಳನ್ನು ಹಿಂಪಡೆಯುವ ಮೂಲಕ ಇಲಾನ್‌ ಮಸ್ಕ್‌ ಅವರ ಕಂಪನಿಗಳನ್ನು ನಾಶಪಡಿಸುವುದಿಲ್ಲ. ಬಿಲಿಯನೇರ್‌ ಟೆಕ್‌ ಉದ್ಯಮಿಗಳ ವ್ಯವಹಾರಗಳು ಅಭಿವೃದ್ಧಿ ಹೊಂದಬೇಕೆಂದು ಬಯಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. 

‘ಅಮೆರಿಕ ಸರ್ಕಾರದಿಂದ ಪಡೆಯುತ್ತಿರುವ ದೊಡ್ಡ ಪ್ರಮಾಣದ ಸಬ್ಸಿಡಿಯಲ್ಲಿ ಸ್ವಲ್ಪ ಭಾಗವನ್ನು ತೆಗೆದುಕೊಳ್ಳುವ ಮೂಲಕ ಇಲಾನ್‌ ಮಸ್ಕ್‌ ಅವರ ಕಂಪನಿಗಳನ್ನು ನಾಶಪಡಿಸುತ್ತೇನೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ಅದು ಹಾಗಲ್ಲ! ನಮ್ಮ ದೇಶದ ಇಲಾನ್‌ ಮಸ್ಕ್‌ ಹಾಗೂ ಎಲ್ಲ ಉದ್ಯಮಿಗಳು ಅಭಿವೃದ್ಧಿ ಹೊಂದಬೇಕೆಂದು ಬಯಸುತ್ತೇನೆ’ ಎಂದು ಟ್ರಂಪ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಅಮೆರಿಕ ಸರ್ಕಾರವು ವಿದ್ಯುತ್‌ಚಾಲಿತ ವಾಹನಗಳಿಗೆ ನೀಡುತ್ತಿದ್ದ ಬೆಂಬಲವನ್ನು ಕಡಿತಗೊಳಿಸಿರುವುದರಿಂದ ಕಂಪನಿಯು ಸಂಕಷ್ಟ ಎದುರಿಸಬೇಕಾದೀತು  ಎಂದು ಮಸ್ಕ್‌ ಅವರು ಬುಧವಾರ ಟೆಸ್ಲಾ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ADVERTISEMENT

ಕಳೆದ ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಗೆಲ್ಲಲು ಮಸ್ಕ್‌ 25 ಕೋಟಿ ಡಾಲರ್‌ ಹಣದ ಸಹಾಯ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.