ADVERTISEMENT

ಫ್ಲಾರಿಡಾದಲ್ಲಿ ಡೊನಾಲ್ಡ್‌ ಟ್ರಂಪ್‌ – ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಭೇಟಿ

ಏಜೆನ್ಸೀಸ್
Published 29 ಡಿಸೆಂಬರ್ 2025, 13:31 IST
Last Updated 29 ಡಿಸೆಂಬರ್ 2025, 13:31 IST
<div class="paragraphs"><p>ಫ್ಲಾರಿಡಾದಲ್ಲಿರುವ ಪಾಮ್‌ ಬೀಚ್‌ಗೆ ಭೇಟಿ ನೀಡಿದ ಉಕ್ರೇನ್‌ ಅಧ್ಯಕ್ಷ ವೊಲೊಡಿಮರ್‌ ಝೆಲೆನ್‌ಸ್ಕಿ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ವಾಗತಿಸಿದರು</p></div>

ಫ್ಲಾರಿಡಾದಲ್ಲಿರುವ ಪಾಮ್‌ ಬೀಚ್‌ಗೆ ಭೇಟಿ ನೀಡಿದ ಉಕ್ರೇನ್‌ ಅಧ್ಯಕ್ಷ ವೊಲೊಡಿಮರ್‌ ಝೆಲೆನ್‌ಸ್ಕಿ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ವಾಗತಿಸಿದರು

   

ಎಎಫ್‌ಪಿ ಚಿತ್ರ

ಫ್ಲಾರಿಡಾ (ಅಮೆರಿಕ): ‘ಯು‌ದ್ಧ ಕೊನೆಗೊಳಿಸುವ ಅಂತಿಮ ಪ್ರಯತ್ನವನ್ನು ಉಕ್ರೇನ್‌ ಅಧ್ಯಕ್ಷ ವೊಲೊಡಿಮರ್‌ ಝೆಲೆನ್‌ಸ್ಕಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ, ಯುದ್ಧ ಅಂತ್ಯಗೊಳಿಸಲು ಯಾವುದೇ ಗಡುವು ವಿಧಿಸಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ADVERTISEMENT

ತಾವು ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ದಿನವೇ ಉಭಯ ದೇಶಗಳ ನಡುವಿನ ಯುದ್ಧವನ್ನು ಕೊನೆಗೊಳಿಸುವುದಾಗಿ ಟ್ರಂಪ್‌ ತಿಳಿಸಿದ್ದರು. ಮಾತುಕತೆ ಆರಂಭಗೊಂಡು ವರ್ಷದ ಬಳಿಕ ಭಾನುವಾರ ಫ್ಲಾರಿಡಾ ಎಸ್ಟೇಟ್‌ನಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರನ್ನು ಸ್ವಾಗತಿಸಿ, ಈ ಹೇಳಿಕೆ ನೀಡಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಝೆಲೆನ್‌ಸ್ಕಿ ಹಾಗೂ ಟ್ರಂಪ್‌ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದಾದ ಸ್ವಲ್ಪ ಹೊತ್ತಿನಲ್ಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜೊತೆಗೆ ಟ್ರಂಪ್ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಇದರಿಂದ ಹೊಸ ಭರವಸೆ ಮೂಡಿತ್ತು. 

ಇತ್ತ ಫ್ಲಾರಿಡಾಕ್ಕೆ ಝೆಲೆನ್‌ಸ್ಕಿ ಹೊರಡಲು ಅನುವಾಗುತ್ತಿದ್ದಂತೆಯೇ, ಉಕ್ರೇನ್‌ನ ಕೀವ್‌ ನಗರದ ಮೇಲೆ ರಷ್ಯಾ ಪ್ರಬಲ ಬಾಂಬ್‌ ದಾಳಿ ನಡೆಸಿತ್ತು. ದಾಳಿಯ ಹೊರತಾಗಿಯೂ, ಪುಟಿನ್‌ ಶಾಂತಿ ಮಾತುಕತೆಗೆ ಬದ್ಧರಾಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್‌, ‘ಈ ವಿಚಾರದಲ್ಲಿ ಪುಟಿನ್‌ ಅವರು ಗಂಭೀರರಾಗಿದ್ದಾರೆ. ಉಕ್ರೇನ್‌ ಕೂಡ ಬಲವಾದ ದಾಳಿಗಳನ್ನು ನಡೆಸಿದೆ ಎಂದು ನಾನು ನಂಬಿದ್ದೇನೆ. ಅದನ್ನು ನಕಾರಾತ್ಮಕವಾಗಿ ಹೇಳುತ್ತಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.