ADVERTISEMENT

ಟ್ರಂಪ್ ಪುತ್ರನಿಗೂ ಕೋವಿಡ್‌ ತಗುಲಿತ್ತು !

ಡೊನಾಲ್ಡ್‌ ಟ್ರಂಪ್ ಪತ್ನಿ ಮಲೇನಿಯಾ ಹೇಳಿಕೆ

ಪಿಟಿಐ
Published 15 ಅಕ್ಟೋಬರ್ 2020, 7:25 IST
Last Updated 15 ಅಕ್ಟೋಬರ್ 2020, 7:25 IST
ಟ್ರಂಪ್ ಮೆಲನಿಯಾ ಮತ್ತು ಪುತ್ರ ಬಾರ್ರೊನ್-(ಸಂಗ್ರಹ ಚಿತ್ರ)
ಟ್ರಂಪ್ ಮೆಲನಿಯಾ ಮತ್ತು ಪುತ್ರ ಬಾರ್ರೊನ್-(ಸಂಗ್ರಹ ಚಿತ್ರ)   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ದಂಪತಿಗೆ ಕೋವಿಡ್‌ 19 ದೃಢಪಟ್ಟ ಸಂದರ್ಭದಲ್ಲೇ, ಅವರ 14ರ ಹರೆಯದ ಪುತ್ರ ಬ್ಯಾರನ್‌ ಟ್ರಂಪ್‌ಗೂ ಸೋಂಕು ತಗುಲಿತ್ತು!

ಈ ವಿಷಯವನ್ನು ಮಲೇನಿಯಾ ಟ್ರಂಪ್ ಅವರೇ ಹೇಳಿಕೊಂಡಿದ್ದಾರೆ. ಈ ವಿಷಯ ಶ್ವೇತಭವನದ ವೆಬ್‌ಸೈಟ್‌ನಲ್ಲಿ ಪೋಸ್ಟ್‌ ಮಾಡಲಾದ ಬ್ಲಾಗ್‌ನಲ್ಲಿ ಉಲ್ಲೇಖವಾಗಿದೆ.

‘ನಮ್ಮಿಬ್ಬರಿಗೂ ಸೋಂಕು ದೃಢಪಟ್ಟ ಅವಧಿಯಲ್ಲೇ ಪುತ್ರ ಬ್ಯಾರನ್‌ಗೂ ಸೋಂಕು ತಗುಲಿತ್ತು. ಆದರೆ, ಅವನು ಹದಿಹರೆಯದವನಾದ್ದರಿಂದ, ಸೋಂಕಿನ ಗುಣಲಕ್ಷಣಗಳು ಕಂಡಿರಲಿಲ್ಲ. ನನಗೆ ಸೌಮ್ಯವಾದ ಲಕ್ಷಣಗಳಿದ್ದವು. ಸ್ವಲ್ಪ ದಿನಗಳ ನಂತರ, ಮತ್ತೆ ಪರೀಕ್ಷೆ ಮಾಡಿಸಿದಾಗ ಮಗನದ್ದು ನೆಗೆಟಿವ್ ವರದಿ ಬಂತು’ ಎಂದು ಮಲೇನಿಯಾ ಹೇಳಿದ್ದಾರೆ.

ADVERTISEMENT

‘ಮಗನನ್ನು ಪುನಃ ಪರೀಕ್ಷೆಗೆ ಒಳಪಡಿಸಿದಾಗ ಎಲ್ಲಿ ಪುನಃ ಅವನಿಗೆ ಸೊಂಕು ತಗುಲಿರುತ್ತದೋ ಎಂದು ಭಯವಾಗಿತ್ತು. ಆದರೆ, ಅವನಲ್ಲಿ ರೋಗಲಕ್ಷಣಗಳೇ ಕಾಣಿಸಿಕೊಳ್ಳಲಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಕೋವಿಡ್‌-19 ಸೋಂಕು ದೃಢಪಟ್ಟ ನಂತರ, ಮಲೇನಿಯಾ ಮತ್ತು ಬ್ಯಾರನ್‌ ಶ್ವೇತಭವನದಲ್ಲಿ ಪ್ರತ್ಯೇಕ ವಾಸದಲ್ಲಿದ್ದರು. ಟ್ರಂಪ್ ಅವರು ಮೂರು ರಾತ್ರಿ ನಾಲ್ಕು ಹಗಲು ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದರು. ಈಗ ಎಲ್ಲರೂ ಗುಣಮುಖರಾಗಿದ್ದಾರೆ. ಟ್ರಂಪ್ ಅವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.