ADVERTISEMENT

Cyprus: ಬ್ರಿಟನ್‌ ವಾಯುನೆಲೆ ಮೇಲೆ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2026, 16:32 IST
Last Updated 2 ಮಾರ್ಚ್ 2026, 16:32 IST
..
..   

ನಿಕೊಸಿಯಾ: ಸೈಪ್ರಸ್‌ ದ್ವೀಪ ರಾಷ್ಟ್ರದಲ್ಲಿರುವ ಬ್ರಿಟಿನ್‌ನ ವಾಯು ನೆಲೆಯ ಮೇಲೆ ಸ್ವಯಂಚಾಲಿತ ಡ್ರೋನ್ ಸೋಮವಾರ ದಾಳಿ ನಡೆಸಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ದಾಳಿಯಿಂದ ಹೆಚ್ಚಿನ ಹಾನಿಯಾಗಿಲ್ಲ ಎಂದು ಸೈಪ್ರಸ್‌ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಯಾವ ರೀತಿಯ ಡ್ರೋನ್‌ನಿಂದ ದಾಳಿ ಮಾಡಲಾಗಿದೆ ಮತ್ತು ಆ ಡ್ರೋನ್‌ಗಳು ಎಲ್ಲಿಂದ ಉಡಾವಣೆಯಾಗಿವೆ ಎಂಬುವುದನ್ನು ಅವರು ತಿಳಿಸಿಲ್ಲ.

ಇರಾನ್‌ ಜೊತೆಗಿನ ಇಸ್ರೇಲ್ –ಅಮೆರಿಕ ಸಂಘರ್ಷದಲ್ಲಿ ಬ್ರಿಟನ್‌ ಅಮೆರಿಕಕ್ಕೆ ಬೆಂಬಲ ನೀಡಲಿದೆ ಎಂದು ಅಲ್ಲಿನ ಪ್ರಧಾನಿ ಕಿಯರ್‌ ಸ್ಟಾರ್ಮರ್ ಹೇಳಿದ ಬೆನ್ನಲ್ಲೇ ಈ ದಾಳಿ ನಡೆದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.