ADVERTISEMENT

ದುಬೈ: ಹಡಗಿನ ಮೇಲೆ ದಾಳಿ

ಏಜೆನ್ಸೀಸ್
Published 17 ಮಾರ್ಚ್ 2024, 21:33 IST
Last Updated 17 ಮಾರ್ಚ್ 2024, 21:33 IST
   

ದುಬೈ: ಗಲ್ಫ್‌ ಆಫ್‌ ಅಡೆನ್‌ನಲ್ಲಿ ಭಾನುವಾರ ಹಡಗೊಂದರ ಮೇಲೆ ದಾಳಿ ನಡೆದಿದ್ದು, ಈ ದಾಳಿಯ ಹಿಂದೆ ಯೆಮೆನ್‌ನ ಹುಥಿ ಬಂಡುಕೋರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಬ್ರಿಟೀಷ್‌ ಮಿಲಿಟರಿಯ ಸಂಯುಕ್ತಸಂಸ್ಥಾನ ಸಮುದ್ರ ವಹಿವಾಟು ಕೇಂದ್ರವು ದಾಳಿಯ ಬಗ್ಗೆ ಮಾಹಿತಿ ನೀಡಿದ್ದು, 'ದಕ್ಷಿಣ ಯೆಮೆನ್‌ನ ಅಡೆನ್‌ ಕರಾವಳಿಯಲ್ಲಿ ದಾಳಿ ನಡೆದಿದೆ’ ಎಂದು ತಿಳಿಸಿದೆ.

‘ಯಾವುದೇ ರೀತಿಯ ಹಾನಿ ಮತ್ತು ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ’ ಎಂದು ಸೆಂಟ್ರಲ್‌ ಕಮಾಂಡ್ ತಿಳಿಸಿದೆ.

ADVERTISEMENT

ಹುಥಿ ಬಂಡುಕೋರರು ಈವರೆಗೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಆದರೆ ಸಾಮಾನ್ಯವಾಗಿ ಹುಥಿ ಬಂಡುಕೋರರು ದಾಳಿ ನಡೆಸಿ ತುಂಬಾ ಸಮಯದ ಬಳಿಕ ತಮ್ಮ ಕೈವಾಡದ ಬಗ್ಗೆ ಘೋಷಣೆ ಮಾಡುತ್ತಾರೆ.

ಅಡೆನ್‌ನಲ್ಲಿ ನಡೆಯುವ ಇಂಧನ ಮತ್ತು ಸರಕು ಸಾಗಾಣೆಗೆ ಅಡ್ಡಿಪಡಿಸುವ ಉದ್ದೇಶದಿಂದ ಹುಥಿ ಬಂಡುಕೋರರು ಪದೇ ಪದೇ ಡ್ರೋನ್‌ ಮತ್ತು ಮಿಸೈಲ್‌ ದಾಳಿಯನ್ನು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.