ADVERTISEMENT

2013ರ ಈಜಿಪ್ಟ್ ಪ್ರತಿಭಟನೆ: 75 ಮಂದಿಗೆ ಗಲ್ಲು ಶಿಕ್ಷೆ

ಏಜೆನ್ಸೀಸ್
Published 8 ಸೆಪ್ಟೆಂಬರ್ 2018, 13:04 IST
Last Updated 8 ಸೆಪ್ಟೆಂಬರ್ 2018, 13:04 IST

ಕೈರೋ: 2013ರಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಿಷೇಧಿತ ಮುಸ್ಲಿಂ ಬ್ರದರ್‌ಹುಡ್‌ ಸಂಘಟನೆಯ ಉನ್ನತ ನಾಯಕರು ಸೇರಿದಂತೆ 75 ಮಂದಿಗೆ ಈಜಿಪ್ಟ್‌ ನ್ಯಾಯಾಲಯ ಶನಿವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

739 ಮಂದಿ ವಿರುದ್ಧ ಸಂಪನ್ಮೂಲಗಳಿಗೆ ಹಾನಿ ಮಾಡಿದ ಆರೋಪ ಹೊರಿಸಲಾಗಿದೆ. ಬ್ರದರ್‌ ಹಡ್‌ ಸಂಘಟನೆ ಮುಖಂಡ ಮೊಹಮ್ಮದ್‌ ಬ್ಯಾಡಿ ಸೇರಿದಂತೆ 46 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಮುಸ್ಲಿಂ ಬ್ರದರ್‌ಹುಡ್‌ಗೆ ಮುಖಂಡ ಮೊಹಮದ್‌ ಮುರ್ಸಿಯನ್ನು ಸೇನೆಯ ಅಧ್ಯಕ್ಷ ಸ್ಥಾನದಿಂದ ವಜಾ ಗೊಳಿಸಿರುವುದನ್ನು ಖಂಡಿಸಿ 2013ರಲ್ಲಿ ಬ್ರದರ್‌ಹುಡ್‌ ಸಂಘಟನೆ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯಲ್ಲಿ 600 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.