ಜಪಾನ್ ಭೂಕಂಪ
ಸುಜು (ಜಪಾನ್): ಜಪಾನ್‌ನಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ಅವಶೇಷಗಳಡಿಯಲ್ಲಿ ಸಿಲುಕಿದ್ದ 90 ವರ್ಷದ ವೃದ್ಧೆಯನ್ನು ಐದು ದಿನಗಳ ಬಳಿಕ ರಕ್ಷಣೆ ಮಾಡಲಾಗಿದೆ.
‘ಸುಜು ನಗರದಲ್ಲಿ ಕುಸಿದ ಮನೆಯೊಂದರ ಅವಶೇಷಗಳಡಿಯಲ್ಲಿ ಈ ವೃದ್ಧೆ ಇದ್ದರು. ಅವರನ್ನು ರಕ್ಷಣೆ ಮಾಡಿದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಎನ್‌ಎಚ್‌ಕೆ ವರದಿ ಮಾಡಿದೆ.
ಆದರೆ, ವಿಪರೀತ ಹಿಮಪಾತ ಮತ್ತು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಭಾನುವಾರದ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ.
‘ಜನವರಿ 1ರಂದು ಸಂಭವಿಸಿದ ಭೂಕಂಪದಿಂದಾಗಿ ಕನಿಷ್ಠ 128 ಮಂದಿ ಮೃತಪಟ್ಟಿದ್ದಾರೆ. 195 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.