ADVERTISEMENT

37 ಚದರ ಮೀಟರ್‌ನ ಪುಟ್ಟ ಮನೆಗೆ ಶಿಫ್ಟ್ ಆದ ಶ್ರೀಮಂತ ಎಲೊನ್ ಮಸ್ಕ್

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 7:42 IST
Last Updated 13 ಆಗಸ್ಟ್ 2021, 7:42 IST
ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ   

ನವದೆಹಲಿ: ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್ ಸಿಇಒ ಎಲೊನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅವರು ಮನಸ್ಸು ಮಾಡಿದರೆ ಎಲ್ಲಿ ಬೇಕಾದರೂ ಮತ್ತು ಯಾವುದೇ ರೀತಿಯ ಅದ್ದೂರಿ ಮನೆಯಲ್ಲಿ ವಾಸಿಸಲು ಶಕ್ತರು. ಆದರೆ, ಅದೆಲ್ಲವನ್ನೂ ಬಿಟ್ಟು 37 ಚದರ ಮೀಟರ್‌ನ ಸಣ್ಣ ಫ್ಲಾಟ್‌ಗೆ ಶಿಫ್ಟ್ ಆಗಿದ್ದಾರೆ.

ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ 37 ಚದರ ಮೀಟರ್‌ನಸ್ಪೇಸ್‌ಎಕ್ಸ್ ಪ್ರಧಾನ ಕಚೇರಿ ಬಳಿಯ ಅವರ ಚಿಕ್ಕ ಮನೆಯ ಬೆಲೆ 50,000 ಡಾಲರ್‌ ಆಗಿದೆ.

ಮಾಧ್ಯಮದ ವರದಿಗಳ ಪ್ರಕಾರ, ಮಸ್ಕ್ ಅವರು ಕ್ಯಾಲಿಫೋರ್ನಿಯಾದಿಂದ ನಿರ್ಗಮಿಸುವ ನಿರ್ಧಾರ ಮಾಡಿದ್ದು, ಅಲ್ಲಿದ್ದ 6 ಮ್ಯಾನ್‌ಷನ್‌ಗಳು ಸೇರಿದಂತೆ ಎಲ್ಲಾ ಭೌತಿಕ ವಸ್ತುಗಳನ್ನು ಮಾರಾಟ ಮಾಡಿದ್ದಾರೆ.

ADVERTISEMENT

‘ಬೊಕಾ ಚಿಕಾದಲ್ಲಿರುವ ಮನೆಯನ್ನು ನಾನು ಸ್ಪೇಸ್‌ಎಕ್ಸ್‌ನಿಂದ ಬಾಡಿಗೆಗೆ ಪಡೆಯುತ್ತಿದ್ದೇನೆ. ಇದು ತುಂಬಾ ಅದ್ಭುತವಾಗಿದೆ. ಇದು ನನ್ನ ಪ್ರಮುಖ ಮನೆಯಾಗಿದೆ’ಎಂದು ಎಲೊನ್ ಮಸ್ಕ್ ಟ್ವೀಟ್‌ನಲ್ಲಿ ಹೇಳಿದ್ದರು.

‘ಸದ್ಯ ಬೇ ಏರಿಯಾದಲ್ಲಿರುವ ಈವೆಂಟ್ಸ್ ಹೌಸ್ ನಾನು ಹೊಂದಿರುವ ಏಕೈಕ ಮನೆ. ನಾನು ಅದನ್ನು ಮಾರಿದರೆ, ಒಂದು ದೊಡ್ಡ ಕುಟುಂಬವು ಖರೀದಿಸದ ಹೊರತು, ಆ ಮನೆ ಹೆಚ್ಚು ಬಳಕೆಯಾಗುವುದಿಲ್ಲ. ಅದೂ ಒಂದು ದಿನ ಸಂಭವಿಸಬಹುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.