ವಾಷಿಂಗ್ಟನ್: ಭವಿಷ್ಯದಲ್ಲಿ ಅಮೆರಿಕ ಮತ್ತು ಯುರೋಪ್ ಅತ್ಯಂತ ನಿಕಟ, ಬಲವಾದ ಪಾಲುದಾರಿಕೆಯನ್ನು ಸೃಷ್ಟಿಸಬಹುದು ಮತ್ತು ಶೂನ್ಯ-ಸುಂಕ ವಲಯವನ್ನು ಸ್ಥಾಪಿಪಬಹುದು ಎಂದು ಆಶಿಸಿರುವುದಾಗಿ ಉದ್ಯಮಿ ಇಲಾನ್ ಮಸ್ಕ್, ಇಟಲಿಯ ಮಂತ್ರಿ ಪರಿಷತ್ತಿನ ಉಪಾಧ್ಯಕ್ಷ ಮ್ಯಾಟಿಯೊ ಸಾಲ್ವಿನಿಗೆ ಹೇಳಿದ್ದಾರೆ.
ಫ್ಲಾರೆನ್ಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾಲ್ವಿನಿಯೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ.
ಯುರೋಪ್ ಮತ್ತು ಉತ್ತರ ಅಮೆರಿಕ ನಡುವೆ ಮುಕ್ತ ವ್ಯಾಪಾರ ವಲಯದೊಂದಿಗೆ ಭವಿಷ್ಯದಲ್ಲಿ ಶೂನ್ಯ-ಸುಂಕ ವಲಯ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಟೆಸ್ಲಾ, ಸ್ಪೇಸ್‌ಎಕ್ಸ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಹೊಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರ ಮಸ್ಕ್, ಹೊಸದಾಗಿ ರಚಿಸಲಾದ ಸರ್ಕಾರಿ ದಕ್ಷತಾ ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಮೆರಿಕ ಜಾಗತಿಕ ಪರಸ್ಪರ ಒಪ್ಪಿತ ಸುಂಕ ನಿಯಮಗಳನ್ನು ಮೀರಿ ಪ್ರತಿ ಆಮದಿನ ಮೇಲೆ ಶೇ 10ರಷ್ಟು ಸುಂಕ ವಸೂಲಿ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.