ADVERTISEMENT

ಕೋವಿಡ್: ಲಾಕ್‌ಡೌನ್ ನಿರ್ಬಂಧ ಹೇರಲು ವಿವಿಧ ರಾಷ್ಟ್ರಗಳ ಸಿದ್ಧತೆ

ಏಜೆನ್ಸೀಸ್
Published 2 ನವೆಂಬರ್ 2020, 8:30 IST
Last Updated 2 ನವೆಂಬರ್ 2020, 8:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬರ್ಲಿನ್‌: ಕೋವಿಡ್‌ ನಿಯಂತ್ರಣ ಕ್ರಮವಾಗಿ ಜರ್ಮನಿಯಲ್ಲಿ ಸೋಮವಾರದಿಂದ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಇದಕ್ಕೆ ಯುರೋಪ್‌ನ ವಿವಿಧೆಡೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಕ್ರಮಗಳ ಬಗ್ಗೆ ಭ್ರಮನಿರಸನಗೊಂಡಿದ್ದಾರೆ.

ಜಗತ್ತಿನಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಯುರೋಪ್‌ ಮತ್ತು ಅಮೆರಿಕದಲ್ಲಿ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ಜರ್ಮನಿಯಲ್ಲಿ ಸೋಂಕು ತಡೆ ಕ್ರಮವಾಗಿ ಅಲ್ಲಿನ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು ಸೋಮವಾರದಿಂದ ತಿಂಗಳಾಂತ್ಯದವರೆಗೆ ಲಾಕ್‌ಡೌನ್‌ ಘೋಷಿಸಿದ್ದಾರೆ. ಆದರೆ ಜನರಿಗೆ ಮನೆಯಲ್ಲೇ ಇರುವಂತೆ ನಿರ್ಬಂಧ ವಿಧಿಸಿಲ್ಲ. ಆದರೆ ಬಾರ್‌, ಕೆಫೆ ಮತ್ತು ರೆಸ್ಟೋರೆಂಟ್‌, ಚಿತ್ರಮಂದಿರ, ಓಪೆರಾಗಳು ತಿಂಗಳಾಂತ್ಯದವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ.

ADVERTISEMENT

ಆಸ್ಟ್ರೀಯ, ಫ್ರಾನ್ಸ್‌, ಐರ್ಲೆಂಡ್ ಮತ್ತು ಇಂಗ್ಲೆಂಡ್‌ ತಮ್ಮ ಪ್ರಜೆಗಳಿಗೆ ಮನೆಯಲ್ಲೇ ಇರುವಂತೆ ಸೂಚಿಸಿದ್ದು, ಮಂಗಳವಾರದಿಂದ ನಾಲ್ಕು ವಾರಗಳ ಲಾಕ್‌ಡೌನ್‌ ಅನ್ನು ಘೋಷಿಸಿದೆ.

ಬೆಲ್ಜಿಯಂನಲ್ಲೂ ಹೆಚ್ಚುತ್ತಿರುವ ಪ್ರಕರಣಗಳನ್ನು ನಿಗ್ರಹಿಸಲು ಸೋಮವಾರದಿಂದ ಕಠಿಣ ಲಾಕ್‌ಡೌನ್‌ ನಿಯಮಗಳನ್ನು ಜಾರಿಗೆ ತರಲಾಗಿದೆ. ಪೋರ್ಚುಗಲ್‌ನಲ್ಲೂ ಬುಧವಾರದಿಂದ ಭಾಗಶಃ ಲಾಕ್‌ಡೌನ್‌ ಹೇರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಸೂಪರ್‌ಮಾರ್ಕೆಟ್‌ಗಳಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಮಾತ್ರ ಅನುಮತಿ ನೀಡಲಾಗಿದೆ ಎಂದು ಫ್ರಾನ್ಸ್‌ನ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಅವರು ತಿಳಿಸಿದರು.

ಇನ್ನು ಸ್ಪೇನ್‌ನಲ್ಲಿ ಈಗಾಗಲೇ ರಾತ್ರಿ ಕರ್ಫ್ಯೂ ಹೇರಲಾಗಿದೆ. ಪ್ರಯಾಣವನ್ನು ತಡೆಯಲು ಪ್ರಾದೇಶಿಕ ಗಡಿಗಳನ್ನು ಮುಚ್ಚಲಾಗಿದೆ. ಇಟಲಿಯಲ್ಲಿ ಸೋಮವಾರದಿಂದ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಅಮೆರಿಕ‌ದಲ್ಲಿ ಸದ್ಯ ಚುನಾವಣಾ ಕಾವು ಬಹಳ ಜೋರಾಗಿದೆ. ಆದರೆ ಅಮೆರಿಕವು 92 ಲಕ್ಷ ಸೋಂಕಿತರು ಮತ್ತು 2.30 ಲಕ್ಷ ಸಾವಿನೊಂದಿಗೆ ಕೋವಿಡ್ ಪೀಡಿತ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.