ADVERTISEMENT

ಗೂಗಲ್‌ ಕ್ಲೌಡ್‌ನ ನೂತನ ಮುಖ್ಯಸ್ಥರಾಗಿ ಥಾಮಸ್‌ ಕುರಿಯನ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 19:33 IST
Last Updated 17 ನವೆಂಬರ್ 2018, 19:33 IST
ಥಾಮಸ್‌ ಕುರಿಯನ್‌
ಥಾಮಸ್‌ ಕುರಿಯನ್‌   

ಸ್ಯಾನ್‌ಫ್ರಾನ್ಸಿಸ್ಕೋ: ಭಾರತ ಮೂಲದ ಥಾಮಸ್‌ ಕುರಿಯನ್‌ ಅವರು ಮುಂದಿನ ವರ್ಷದಿಂದ ಗೂಗಲ್‌ ಕ್ಲೌಡ್‌ನ ಮುಖ್ಯಸ್ಥರಾಗಲಿದ್ದಾರೆ ಎಂದು ಸಾಫ್ಟ್‌ವೇರ್‌ ಸಂಸ್ಥೆ ಘೋಷಿಸಿದೆ. ಈ ಕುರಿತುಎನ್‌ಡಿಟಿವಿ ವರದಿ ಮಾಡಿದೆ. ಥಾಮಸ್‌ ಅವರು ಈ ಹಿಂದೆ ಒರಾಕಲ್‌ನ ಪ್ರಾಡಕ್ಟ್‌ ಡೆವಲಪ್‌ಮೆಂಟ್‌ ಹಾಗೂ ಟೆಕ್ನಾಲಜಿಸ್ಟ್‌ನ ಅಧ್ಯಕ್ಷರಾಗಿದ್ದರು.

ಸಂಸ್ಥೆಯ ಈಗಿನ ಸಿಇಒ ಆಗಿರುವ ಡಯಾನೆ ಗ್ರೀನೆ ಮುಂದಿನ ಜನವರಿ ವೇಳೆಗೆ ಕುರಿಯನ್‌ ಅವರಿಗೆ ಜವಾಬ್ದಾರಿ ವಹಿಸಲಿದ್ದಾರೆ. ಇದೇ ನವೆಂಬರ್‌ 26ರಂದು ಕುರಿಯನ್‌ ಅವರು ಸಂಸ್ಥೆಗೆ ಸೇರಲಿದ್ದು, ಜನವರಿ ವೇಳೆಗೆ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಗೂಗಲ್‌ನ ಮಾತೃಸಂಸ್ಥೆ ಅಲ್ಫಾಬೆಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ಮೂಲದ ಕುರಿಯನ್‌ 22 ವರ್ಷಗಳ ಕಾಲ ಒರಾಕಲ್‌ ಸಂಸ್ಥೆಯಲ್ಲಿ ಜವಾಬ್ದಾರಿ ನಿರ್ವಹಿಸಿದ್ದರು.

ADVERTISEMENT

ಥಾಮಸ್‌ ಕುರಿಯನ್‌ ಅವರ ಸಹೋದರ ಜಾರ್ಜ್‌ ಕುರಿಯನ್‌ ಕೂಡ ಕ್ಯಾಲಿಪೋರ್ನಿಯಾ ಮೂಲದ ಹೈಬ್ರೀಡ್‌ ಕ್ಲೌಡ್‌ ಡೇಟಾ ಸರ್ವೀಸಸ್‌ನ ಸಿಇಒ ಹಾಗೂ ಡೇಟಾ ಮ್ಯಾನೇಜ್‌ಮೆಂಟ್‌ ಸಂಸ್ಥೆ ‘ನೆಟ್‌ಆ್ಯಪ್‌’ನ ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.