ADVERTISEMENT

ಪಾಕ್‌: ಪಿಎಂಎಲ್‌ಎನ್‌ ಚುಕ್ಕಾಣಿ ಹಿಡಿಯಲು ನವಾಜ್‌ ಸಿದ್ಧ

ಪಿಟಿಐ
Published 27 ಏಪ್ರಿಲ್ 2024, 15:45 IST
Last Updated 27 ಏಪ್ರಿಲ್ 2024, 15:45 IST
ನವಾಜ್‌ ಷರೀಫ್‌ –ಪಿಟಿಐ ಸಂಗ್ರಹ ಚಿತ್ರ
ನವಾಜ್‌ ಷರೀಫ್‌ –ಪಿಟಿಐ ಸಂಗ್ರಹ ಚಿತ್ರ   

ಲಾಹೋರ್‌: ಆಡಳಿತಾರೂಢ ಪಾಕಿಸ್ತಾನ್‌ ಮುಸ್ಲಿಂ ಲೀಗ್‌–ನವಾಜ್‌ (ಪಿಎಂಎಲ್‌–ಎನ್‌) ಪಕ್ಷದಲ್ಲಿ ಆಂತರಿಕ ಕಲಹ ನಡೆಯುತ್ತಿರುವ ಮಧ್ಯದಲ್ಲೇ ಪಕ್ಷದ ಚುಕ್ಕಾಣಿಯನ್ನು ಹಿಡಿಯಲು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರು ಸನ್ನದ್ಧರಾಗಿದ್ದಾರೆ.

‘ನವಾಜ್‌ ಅವರನ್ನು ಮತ್ತೆ ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಶುಕ್ರವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಮೇ 11ರಂದು ಪಕ್ಷದ ನಾಯಕತ್ವದ ಸಭೆ ನಡೆಯಲಿದ್ದು, ಅಂದು ನವಾಜ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು’ ಎಂದು ಪಂಜಾಬ್‌ ಪ್ರಾಂತ್ಯದ ಪಿಎಂಎಲ್‌–ಎನ್‌ ಅಧ್ಯಕ್ಷ ರಾಣಾ ಸನಾವುಲ್ಲಾ ಅವರು ತಿಳಿಸಿದ್ದಾರೆ.

ನವಾಜ್‌ ಅವರು ಏಳು ವರ್ಷಗಳ ಬಳಿಕ ಪಿಎಂಎಲ್‌–ಎನ್‌ ಅಧ್ಯಕ್ಷರಾಗಿ ಮರು ಆಯ್ಕೆಯಾಗುತ್ತಿದ್ದಾರೆ. ನವಾಜ್‌ ಅವರು ವಿದೇಶದಲ್ಲಿ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿಯನ್ನು ‘ಪನಾಮಾ ಪೇಪರ್ಸ್‌’ ಬಹಿರಂಗಪಡಿಸಿದ್ದರಿಂದ 2017ರಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್‌, ಅವರನ್ನು ಪಿಎಂಎಲ್‌–ಎನ್‌ ಪಕ್ಷದ ಅಧ್ಯಕ್ಷ ಮತ್ತು ಪ್ರಧಾನಿ ಸ್ಥಾನದಿಂದ ಅನರ್ಹಗೊಳಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.