ADVERTISEMENT

ರಷ್ಯಾದಲ್ಲಿ ಸಿಲಿಂಡರ್ ಸ್ಫೋಟ: 9 ಮಂದಿ ಸಾವು

ಏಜೆನ್ಸೀಸ್
Published 19 ನವೆಂಬರ್ 2022, 12:56 IST
Last Updated 19 ನವೆಂಬರ್ 2022, 12:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಾಸ್ಕೊ, ರಷ್ಯಾ: ಪೂರ್ವ ರಷ್ಯಾದ ಸಖಾಲಿನ್‌ ದ್ವೀಪದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸಿಲಿಂಡರ್‌ ಸ್ಫೋಟಗೊಂಡು ನಾಲ್ವರು ಮಕ್ಕಳು ಸೇರಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ.

‘ಟೈಮೊವ್‌ಸ್ಕೊಯೆ ನಗರದ ಐದು ಅಂತಸ್ತಿನ ಕಟ್ಟಡದ ಅಪಾರ್ಟ್‌ಮೆಂಟ್‌ನಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 5.30ರ ಸುಮಾರಿಗೆ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಕಟ್ಟಡದ ಒಂದು ಭಾಗ ನೆಲಸಮಗೊಂಡಿದೆ’ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

‘ಕಟ್ಟಡದ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ತಂಡದವರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ. ಕಟ್ಟಡದಲ್ಲಿ ವಾಸಿಸುತ್ತಿದ್ದವರ ಪೈಕಿ 33 ಮಂದಿಯ ಸುಳಿವು ಸಿಕ್ಕಿಲ್ಲ’ ಎಂದು ಸಖಾಲಿನ್‌ ಗವರ್ನರ್‌ ವಲೆರಿ ಲಿಮಾರೆಂಕೊ ಟೆಲಿಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.