ADVERTISEMENT

ಬ್ರೆಜಿಲ್‌ ಅಧ್ಯಕ್ಷರ ಬೆಂಬಲಿಗರ ಖಾತೆಗಳಿಗೆ ನಿರ್ಬಂಧ ವಿಧಿಸಿದ ಫೇಸ್‌ಬುಕ್‌

ನ್ಯಾಯಾಲಯ ಆದೇಶ ಪಾಲನೆ

ಏಜೆನ್ಸೀಸ್
Published 2 ಆಗಸ್ಟ್ 2020, 7:24 IST
Last Updated 2 ಆಗಸ್ಟ್ 2020, 7:24 IST
ಫೇಸ್‌ಬುಕ್‌
ಫೇಸ್‌ಬುಕ್‌   

ಬ್ರೆಸಿಲಿಯಾ: ಬ್ರೆಜಿಲ್‌‌ ನ್ಯಾಯಾಲಯದ ಆದೇಶದಂತೆ ಅಲ್ಲಿನ ಅಧ್ಯಕ್ಷ ಜೈರ್‌ ಬೋಲ್ಸೊನಾರೊ ಅವರ 12 ಬೆಂಬಲಿಗರ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಫೇಸ್‌ಬುಕ್‌ ತಿಳಿಸಿದೆ.

ಈ 12 ಮಂದಿಯ ವಿರುದ್ಧ ನಕಲಿ ಸುದ್ದಿ ಜಾಲ ಸೃಷ್ಟಿಯ ಆರೋಪವಿದೆ. ಹಾಗಾಗಿ ಅವರ ಫೇಸ್‌ಬುಕ್‌ ಖಾತೆಯನ್ನು ವಿಶ್ವದಾದ್ಯಂತ ನಿರ್ಬಂಧಿಸಬೇಕು ಎಂದುಬ್ರೆಜಿಲ್‌ ನ್ಯಾಯಾಲಯ ಆದೇಶಿಸಿತ್ತು.

ಫೇಸ್‌ಬುಕ್‌ ಖಾತೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂಬ ಹಿಂದಿನ ಆದೇಶವನ್ನು ಸಂಸ್ಥೆಯು ಪಾಲಿಸಿಲ್ಲ. ಬ್ರೆಜಿಲ್‌ ದೇಶದ ಹೊರಗಡೆಯಿಂದ ಅವರು ಆನ್‌ಲೈನ್‌ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬ್ರೆಜಿಲ್‌ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅಲೆಕ್ಸಾಂಡ್ರೆ ಡಿ ಮೊರೇಸ್‌ ಅವರು ಶುಕ್ರವಾರ ಹೇಳಿದ್ದರು.

ADVERTISEMENT

ಹಿಂದಿನ ಆದೇಶವನ್ನು 8 ದಿನಗಳಷ್ಟು ತಡವಾಗಿ ಪಾಲಿಸಿದಕ್ಕೆ ಫೇಸ್‌ಬುಕ್‌ 3.67 ಲಕ್ಷ ಡಾಲರ್‌ ದಂಡ ಕಟ್ಟಬೇಕು ಎಂದು ನ್ಯಾಯಮೂರ್ತಿ ಡಿ ಮೊರೇಸ್‌ ಆದೇಶಿಸಿದ್ದಾರೆ.

12 ಖಾತೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಐಪಿ ವಿಳಾಸ ಬದಲಿಸಿ ಖಾತೆಯನ್ನು ಬಳಸಲು ಪ್ರಯತ್ನಿಸಿದರೂ ಬ್ರೆಜಿಲ್‌ನ ನಾಗರಿಕರಿಗೆ ಅವರ ಖಾತೆಗಳು ಲಭ್ಯವಾಗುವುದಿಲ್ಲ ಎಂದು ಫೇಸ್‌ಬುಕ್‌ ತಿಳಿಸಿದೆ.

ಆದರೆ, ಈ ರೀತಿಯ ಆದೇಶಗಳು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುತ್ತವೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.