ADVERTISEMENT

ಅಮೆರಿಕ: ಫೇಸ್‌ಬುಕ್‌ನಲ್ಲಿ ರಾಜಕೀಯ, ಸಾಮಾಜಿಕ ವಿಷಯಗಳ ಜಾಹೀರಾತು ನಿಷೇಧ ತೆರವು

ಕಳೆದ ವರ್ಷ ನ.3ರ ಅಧ್ಯಕ್ಷೀಯ ಚುನಾವಣೆ ವೇಳೆ ಹೇರಿದ್ದ ನಿಷೇಧ

ಏಜೆನ್ಸೀಸ್
Published 4 ಮಾರ್ಚ್ 2021, 6:45 IST
Last Updated 4 ಮಾರ್ಚ್ 2021, 6:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: 2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಂತರ, ಫೇಸ್‌ಬುಕ್‌ನಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಷಯಕ್ಕೆ ಸಂಬಂಧಿಸಿದ ಜಾಹೀರಾತು ಪ್ರಕಟಣೆ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ತೆಗೆದು ಹಾಕಿರುವುದಾಗಿ ಫೇಸ್‌ಬುಕ್ ತಿಳಿಸಿದೆ.

ರಾಜಕಾರಣಿಗಳು, ಇತರೆ ರಾಜಕೀಯ ಗುಂಪುಗಳು ಗುರುವಾರದಿಂದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಜಾಹೀರಾತುಗಳನ್ನು ಪ್ರಕಟಿಸಲು ಆರಂಭಿಸಬಹುದು ಎಂದು ಫೇಸ್‌ಬುಕ್‌ ತಿಳಿಸಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ವೇಳೆ, ಫೇಸ್‌ಬುಕ್‌ ರಾಜಕೀಯ ಜಾಹೀರಾತುಗಳ ಪ್ರಕಟಣೆಗೆ ನಿರ್ಬಂಧ ಹೇರಿತ್ತು. ಚುನಾವಣೆ ವೇಳೆ ತಪ್ಪು ಮಾಹಿತಿ ಹರಡುವುದಕ್ಕೆ ಫೇಸ್‌ಬುಕ್ ವೇದಿಕೆ ಕಲ್ಪಿಸುವುದಿಲ್ಲ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಕಳೆದ ವರ್ಷ ಫೇಸ್‌ಬುಕ್‌ ಕೈಗೊಂಡ ಕ್ರಮಗಳಲ್ಲಿ ಇದೂ ಒಂದಾಗಿತ್ತು.

ADVERTISEMENT

ನವೆಂಬರ್ 3 ರಂದು ಮತದಾನ ಮುಕ್ತಾಯವಾದಾಗ ಅಮೆರಿಕದ ರಾಜಕೀಯ ಜಾಹೀರಾತುಗಳ ಮೇಲೆ ಫೇಸ್‌ಬುಕ್ ನಿರ್ಬಂಧ ಹೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.