ADVERTISEMENT

ಸಿರಿಯಾದಲ್ಲಿ ಅಸಾದ್ ಆಡಳಿತ ಅಂತ್ಯ | ದೇಶ ನಿರ್ಮಾಣಕ್ಕೆ ಉತ್ತಮ ಅವಕಾಶ: ಬೈಡನ್

ಪಿಟಿಐ
Published 9 ಡಿಸೆಂಬರ್ 2024, 2:10 IST
Last Updated 9 ಡಿಸೆಂಬರ್ 2024, 2:10 IST
<div class="paragraphs"><p>ಸಿರಿಯಾದಲ್ಲಿ ಅಸಾದ್ ಆಡಳಿತ ಅಂತ್ಯ | ದೇಶ ನಿರ್ಮಾಣಕ್ಕೆ ಉತ್ತಮ ಅವಕಾಶ ಎಂದ ಬೈಡನ್</p></div>

ಸಿರಿಯಾದಲ್ಲಿ ಅಸಾದ್ ಆಡಳಿತ ಅಂತ್ಯ | ದೇಶ ನಿರ್ಮಾಣಕ್ಕೆ ಉತ್ತಮ ಅವಕಾಶ ಎಂದ ಬೈಡನ್

   

ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್‌: ‘ಕಳೆದ ಅರ್ಧ ಶತಮಾನಗಳಿಂದ ಸಾವಿರಾರು ಅಮಾಯಕ ಸಿರಿಯಾ ಪ್ರಜೆಗಳನ್ನು ಹಿಂಸಿಸಿ ಕೊಂದ ಬಶರ್ ಅಸಾದ್‌ ಸರ್ಕಾರ ಪತನವಾಗಿರುವುದು ದೇಶದ ಜನರಿಗೆ ಸಿಕ್ಕ ಐತಿಹಾಸಿಕ ಅವಕಾಶವಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್‌ ಹೇಳಿದ್ದಾರೆ.

ADVERTISEMENT

ಬಂಡಾಯ ಹೋರಾಟಗಾರರು ಬಶರ್ ಅಸಾದ್‌ ಕುಟುಂಬದ ಐದು ದಶಕಗಳ ನಾಯಕತ್ವವನ್ನು ಪತನಗೊಳಿಸಿ ದೇಶವನ್ನು ವಶಪಡಿಸಿಕೊಂಡ ಬಳಿಕ ಶ್ವೇತಭವನದಲ್ಲಿ ಮಾತನಾಡಿದ ಬೈಡನ್‌, ‘ಸಿರಿಯಾದಲ್ಲಿ 13 ವರ್ಷಗಳ ಅಂತರ್‌ಯುದ್ಧದ ನಂತರ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ನಿರಂಕುಶ ಆಡಳಿತ ನಡೆಸಿದ್ದ ಬಶರ್‌ ಅಸ್ಸಾದ್‌ ಮತ್ತು ಆತನ ಕುಟುಂಬವನ್ನು ಬಂಡಾಯ ಹೋರಾಟಗಾರರು ದೇಶ ತೊರೆಯುವಂತೆ ಮಾಡಿದ್ದಾರೆ. ಅವರು ಎಲ್ಲಿದ್ದಾರೆಂದು ನಮಗೆ ಖಚಿತವಿಲ್ಲ. ಮಾಸ್ಕೊದಲ್ಲಿ ನೆಲೆ ಕಂಡಿದ್ದಾರೆ ಎನ್ನುವ ಮಾತುಗಳಿವೆ. ಸಿರಿಯಾದ ಜನರಿಗೆ ಸದೃಢ ದೇಶವನ್ನು ನಿರ್ಮಿಸಿಲು ಇದು ಐತಿಹಾಸಿಕ ಅವಕಾಶದ ಕ್ಷಣವಾಗಿದೆ’ ಎಂದು ಹೇಳಿದ್ದಾರೆ.

‘ಇದು ಅಪಾಯ ಮತ್ತು ಅನಿಶ್ಚಿತತೆಯ ಸಮಯವಾಗಿದೆ. ಈ ಅವಧಿಯಲ್ಲಿ ನೆರೆಹೊರೆಯ ರಾಷ್ಟ್ರಗಳಾದ ಜೋರ್ಡಾನ್‌, ಇರಾಕ್‌, ಇಸ್ರೇಲ್‌, ಲೆಬನಾನ್‌ಗಳಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿದರೆ ಬೆಂಬಲಕ್ಕೆ ಅಮೆರಿಕ ಸಿದ್ಧವಾಗಿದೆ. ಇದಲ್ಲದೆ ಸಿರಿಯಾದಲ್ಲಿ ಸ್ಥಿರತೆಯನ್ನು ಸ್ಥಾಪಿಸಲು ನಾವು ನೆರವಾಗುತ್ತೇವೆ’ ಎಂದು ಬೈಡನ್‌ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.