ನವದೆಹಲಿ: ಎಡಪಂಥೀಯರು ತಮ್ಮನ್ನೂ ಒಳಗೊಂಡಂತೆ ಎಲ್ಲರನ್ನು ದ್ವೇಷಿಸುತ್ತಾರೆ ಎಂದು ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಅವರು ಹೇಳಿದ್ದಾರೆ.
ಎಲೆಕ್ಟ್ರಿಕ್ ಕಾರು ‘ಟೆಸ್ಲಾ’ದ ಸಿಇಒ ಮಸ್ಕ್ ಇತ್ತೀಚೆಗೆ 44 ಬಿಲಿಯನ್ ಡಾಲರ್ (ಸುಮಾರು ₹3.36 ಲಕ್ಷ ಕೋಟಿ)ಗೆ ಟ್ವಿಟರ್ ಕಂಪನಿಯ ಪೂರ್ತಿ ಷೇರು ತನ್ನದಾಗಿಸಿಕೊಂಡಿದ್ದಾರೆ. ಇದಾದ ನಂತರ, ಟ್ವಿಟರ್‌ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಪೋಸ್ಟ್ ಪ್ರಕಟಿಸಿದ್ದ ಮಸ್ಕ್, ‘ಸಾರ್ವಜನಿಕರ ವಿಶ್ವಾಸವನ್ನು ಗಳಿಸಲು ಟ್ವಿಟರ್ ಅನ್ನು ‘ರಾಜಕೀಯವಾಗಿ ತಟಸ್ಥ’ ವೇದಿಕೆಯನ್ನಾಗಿ ರೂಪಿಸುವ ಇರಾದೆ ವ್ಯಕ್ತಪಡಿಸಿದ್ದರು.
ಮಸ್ಕ್ ಅವರ ಈ ಟ್ವೀಟ್ ಭಾರಿ ಚರ್ಚೆಗೆ ಕಾರಣವಾಗಿದೆ. ಇದರ ಮುಂದುವರಿದ ಭಾಗವಾಗಿ ಶುಕ್ರವಾರ ಹೊಸದೊಂದು ಅನಿಸಿಕೆ ಸೇರಿಸಿರುವ ಮಸ್ಕ್ ‘ಎಡಪಂಥೀಯರು ತಮ್ಮನ್ನೂ ಒಳಗೊಂಡಂತೆ ಎಲ್ಲರನ್ನು ದ್ವೇಷಿಸುತ್ತಾರೆ. ಹಾಗೆಂದು ನಾನು ಬಲಪಂಥೀಯರ ಅಭಿಮಾನಿಯೂ ಅಲ್ಲ. ದ್ವೇಷ ಕಡಿಮೆ ಮಾಡೋಣ, ಹೆಚ್ಚು ಪ್ರೀತಿಯನ್ನು ಹೊಂದೋಣ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.