ADVERTISEMENT

ಅಮೆರಿಕ: ಪೆಗಾಸಸ್‌ ಖರೀದಿ ದೃಢೀಕರಿಸಿದ ಎಫ್‌ಬಿಐ

ಏಜೆನ್ಸೀಸ್
Published 3 ಫೆಬ್ರುವರಿ 2022, 19:30 IST
Last Updated 3 ಫೆಬ್ರುವರಿ 2022, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌:ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಸಂಸ್ಥೆಯಿಂದ ಪೆಗಾಸಸ್‌ ಬೇಹುಗಾರಿಕೆಕುತಂತ್ರಾಂಶಖರೀದಿ ಮಾಡಿರುವುದನ್ನುಅಮೆರಿಕದ ಎಫ್‌ಬಿಐ ದೃಢಪಡಿಸಿದ್ದು, ಇದನ್ನು ಪ್ರಯೋಗ ಮತ್ತು ಗುಣಮಟ್ಟದ ಪರೀಕ್ಷೆಗೆ ಮಾತ್ರ ಬಳಸಲಾಗಿದೆ. ತನಿಖೆಯ ಉದ್ದೇಶಕ್ಕೆ ಬಳಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಪತ್ರಕರ್ತರು, ಚಿಂತಕರು, ಮಾನವ ಹಕ್ಕುಗಳ ಹೋರಾಟಗಾರರ ಮೇಲೆ ಬೇಹುಗಾರಿಕೆ ನಡೆಸುವ ವಿಶ್ವದಅತ್ಯಂತ ಪ್ರಬಲಕುತಂತ್ರಾಂಶ ಪೆಗಾಸಸ್‌ ಅನ್ನು ಭಾರತ ಖರೀದಿಸಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಈಚೆಗೆ ವರದಿ ಮಾಡಿತ್ತು. ಆದರೆ, ಭಾರತ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಬೆಳೆಯುತ್ತಿರುವಅತ್ಯಾಧುನಿಕ ತಂತ್ರಜ್ಞಾನ ಮತ್ತುವ್ಯಾಪಾರೋದ್ಯಮದ ದೃಷ್ಟಿಯಿಂದ ಇಸ್ರೇಲ್‌ ಸಂಸ್ಥೆಯಿಂದ ಸೀಮಿತ ಪರವಾನಗಿಯಲ್ಲಿ ಪೆಗಾಸಸ್‌ ಅನ್ನು ಖರೀದಿಸಲಾಗಿತ್ತು.ಇದರಿಂದ ಪರೀಕ್ಷೆ ಹಾಗೂ ಗುಣಮಟ್ಟದ ಮೌಲ್ಯ ಮಾಪನ ನಡೆಸಲಾಗಿತ್ತೇ ಹೊರತು ಯಾವುದೇ ಕಾರ್ಯಾಚರಣೆಗೆ ಬಳಸಿಲ್ಲ ಎಂದು ಎಫ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಪ್ರಯೋಗ ಮತ್ತುಮೌಲ್ಯಮಾಪನ ಅಂತ್ಯಗೊಂಡಿರುವುದರಿಂದ ಪೆಗಾಸಸ್‌ಕುತಂತ್ರಾಂಶವನ್ನು ಮುಂದುವರಿಸದೆ ಇರಲು ನಿರ್ಧರಿಸಲಾಗಿದೆ. ಇನ್ನು ಮುಂದೆಪರವಾನಗಿಯೂ ಸಕ್ರಿಯವಾಗಿರುವುದಿಲ್ಲ. ಕುತಂತ್ರಾಂಶ ಕೂಡ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದೆ.

ಉದ್ದೇಶ ಇಷ್ಟೇ ಆಗಿದ್ದರೆ, ವಿಶ್ವದ ಕುಖ್ಯಾತ ಬೇಹುಗಾರಿಕೆಕುತಂತ್ರಾಂಶಕ್ಕೆ ಅಮೆರಿಕದ ಕಾನೂನು ನಿರ್ದೇಶನಾಲಯ ಏಕೆ ಹಣ ಪಾವತಿಸಬೇಕಿತ್ತು ಎಂಬ ಟೀಕೆ ವ್ಯಕ್ತವಾಗಿದೆ. ಎಫ್‌ಬಿಐ ವಕ್ತಾರರು ಎನ್‌ಎಸ್‌ಒ ಗ್ರೂಪ್‌ ಸಂಸ್ಥೆಗೆ ಹಣ ಪಾವತಿಸಿರುವ ಕುರಿತು ಪ್ರತಿಕ್ರಿಯಿಸಿಲ್ಲ. ಆದರೆ, ಒಂದು ವರ್ಷದ ಪರವಾನಗಿಗಾಗಿ ಐದು ಮಿಲಿಯನ್‌ ಯುಎಸ್‌ ಡಾಲರ್‌(ಅಂದಾಜು ₹37.36 ಕೋಟಿ) ಪಾವತಿ ಮಾಡಿರುವ ಬಗ್ಗೆ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.