ADVERTISEMENT

ಕ್ಯಾಪಿಟಲ್‌ ಹಿಂಸಾಚಾರ: ದಂಗೆಕೋರರ ವಿರುದ್ಧ 160 ಪ್ರಕರಣ ದಾಖಲು

ಪಿಟಿಐ
Published 13 ಜನವರಿ 2021, 5:25 IST
Last Updated 13 ಜನವರಿ 2021, 5:25 IST
ಕ್ಯಾಪಿಟಲ್‌ ಹಿಲ್ ಕಟ್ಟಡ
ಕ್ಯಾಪಿಟಲ್‌ ಹಿಲ್ ಕಟ್ಟಡ   

ವಾಷಿಂಗ್ಟನ್‌: ಅಮೆರಿಕದ ಸಂಸತ್‌ ಭವನದ (ಕ್ಯಾಪಿಟಲ್‌) ಮೇಲೆ ಜನವರಿ 6 ರಂದು ದಾಳಿ ನಡೆಸಿದವರ ವಿರುದ್ಧ ಎಫ್‌ಬಿಐ 160 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಷಿಂಗ್ಟನ್‌ನ ಎಫ್‌ಬಿಐ ಅಧಿಕಾರಿ ಸ್ಟೀವನ್‌ ಎಂ ಡಿ ಆಂಟುವೊನೊ, ಕ್ಯಾಪಿಟಲ್‌ ಮೇಲಿನ ದಾಳಿಯಲ್ಲಿ ಭಾಗವಹಿಸಿದ ಪ್ರತಿಭಟನಕಾರರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಕುರಿತಾಗಿ ಅಮೆರಿಕದ ಅಟಾರ್ನಿ ಕಚೇರಿ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ’ ಎಂದರು.

‘ಆರು ದಿನಗಳಲ್ಲಿ ನಾವು ದಂಗೆಕೋರರ ವಿರುದ್ಧ 160 ಪ್ರಕರಣಗಳನ್ನು ದಾಖಲಿಸಿದ್ದೇವೆ. ಇದು ಕೇವಲ ಆರಂಭವಷ್ಟೇ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.