ADVERTISEMENT

‘ದೀಪಾವಳಿ’ ಅಂಚೆ ಚೀಟಿ ಬಿಡುಗಡೆ ಮಾಡಿದ ವಿಶ್ವಸಂಸ್ಥೆ

ಪಿಟಿಐ
Published 7 ನವೆಂಬರ್ 2018, 13:27 IST
Last Updated 7 ನವೆಂಬರ್ 2018, 13:27 IST
ಚಿತ್ರ ಕೃಪೆ: ಸೈಯದ್ ಅಕ್ಬರುದ್ದೀನ್ ಅವರ ಟ್ವಿಟರ್ ಖಾತೆ
ಚಿತ್ರ ಕೃಪೆ: ಸೈಯದ್ ಅಕ್ಬರುದ್ದೀನ್ ಅವರ ಟ್ವಿಟರ್ ಖಾತೆ   

ವಿಶ್ವಸಂಸ್ಥೆ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಅಂಚೆ ವಿಭಾಗ ಅಂಚೆ ಚೀಟಿ ಬಿಡುಗಡೆ ಮಾಡಿದೆ.

ವಿಶ್ವಸಂಸ್ಥೆಯ ಈ ನಿರ್ಧಾರಕ್ಕೆ ಭಾರತ ಧನ್ಯವಾದ ಸಲ್ಲಿಸಿದೆ.

‘ವಿಶ್ವಸಂಸ್ಥೆಯಲ್ಲಿ ಒಳಿತು ಮತ್ತು ಕೆಡುಕು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ದೀಪಾವಳಿ ಸಂದರ್ಭದಲ್ಲಿ ಕೆಟ್ಟದ್ದರ ಮೇಲೆ ಒಳ್ಳೆಯದು ಜಯಭೇರಿ ಬಾರಿಸುವುದರ ಸಂಕೇತವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಧನ್ಯವಾದಗಳು’ ಎಂದು ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಸೈಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದಾರೆ.

ADVERTISEMENT

ವಿಶ್ವಸಂಸ್ಥೆ ಪ್ರಧಾನ ಕಚೇರಿ ಕಟ್ಟಡದ ಚಿತ್ರದ ಜೊತೆಗೆ ದೀಪ ಬೆಳಗುತ್ತಿರುವ ಚಿತ್ರವನ್ನು ಈ ಅಂಚೆ ಚೀಟಿ ಒಳಗೊಂಡಿದ್ದು, ದೀಪಾವಳಿಗೆ ಶುಭಾಶಯವನ್ನು ಕೋರಲಾಗಿದೆ.

2016ರಲ್ಲಿ ಅಮೆರಿಕ ಅಂಚೆ ಇಲಾಖೆ ದೀಪಾವಳಿಯ ಸಂದರ್ಭದಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.