ADVERTISEMENT

ಮಾನವನಂಥ ತುಟಿ, ಹಲ್ಲುಗಳನ್ನು ಹೊಂದಿರುವ ಮೀನು ಪತ್ತೆ 

ಏಜೆನ್ಸೀಸ್
Published 11 ಜುಲೈ 2020, 14:14 IST
Last Updated 11 ಜುಲೈ 2020, 14:14 IST
   

ನವದೆಹಲಿ: ಈ ಮೀನುಗಳನ್ನು ಟ್ರಿಗರ್ ಫಿಶ್ ಎಂದು ಕರೆಯಲಾಗುತ್ತದೆ. ಅವುಗಳು 'ಮಾನವನ ರೀತಿಯ' ಹಲ್ಲು ಮತ್ತು ತುಟಿಗಳಿಗೆ ಸುಪ್ರಸಿದ್ಧ.

ಮಲೇಷ್ಯಾದಲ್ಲಿ ಈ ಮೀನು ಸಿಕ್ಕಿದೆ ಎಂದು ಹೇಳಲಾಗುತ್ತಿದ್ದು, ಅದರ ಚಿತ್ರಗಳು ಸದ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

ತೀರ ಅಪರೂಪದ ಈ ಮೀನಿನ ಚಿತ್ರ ಸಾಮಾಜಿಕ ತಾಣಗಳಿಗೆ ಪ್ರವೇಶಿಸಿದ್ದೇ ತಡ, ಜನ ಮುಗಿ ಬಿದ್ದು ಶೇರ್‌ ಮಾಡಿದ್ದಾರೆ. ಹೀಗಾಗಿ ಮೀನಿನ ಚಿತ್ರಗಳು ವೈರಲ್‌ ಆಗಿವೆ. ಮೀನಿನ ರೂಪ ಕಂಡ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಈ ಮೀನು ಮಲೇಷ್ಯಾದ ಯಾವ ಭಾಗದಲ್ಲಿ ಪತ್ತೆಯಾಗಿದೆ, ಎಂದು ಪತ್ತೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ADVERTISEMENT

ಹಿಂದೂ ಮಹಾಸಾಗರವೇ ಆವಸ ಸ್ಥಾನ

ಟ್ರಿಗರ್ ಫಿಶ್‌ಗಳು ಬಾಲಿಸ್ಟಿಡೇ ಜಾತಿಗೆ ಸೇರಿದ ಮೀನುಗಳಾಗಿವೆ. ಇದರಲ್ಲಿ 40 ಪ್ರಬೇಧಗಳಿವೆ ಎಂದು ಹೇಳಲಾಗಿದೆ. ಅವು ವಿಶ್ವದಾದ್ಯಂತ ಉಷ್ಣವಲಯದ ಸಾಗರಗಳಲ್ಲಿ ವಾಸಿಸುತ್ತವೆ, ಹಿಂದೂ ಮಹಾಸಾಗರದಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.