ಕೊತಾ ಭಾರು: ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಮಲೇಷ್ಯಾದ ದಕ್ಷಿಣ ಥಾಯ್ಲೆಂಡ್‌ನಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ನಿರ್ವಸತಿಗರಾಗಿದ್ದಾರೆ ಎಂದು ಮಂಗಳವಾರ ಇಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಐದು ದಿನಗಳಲ್ಲಿ ಇಲ್ಲಿನ ಪೂರ್ವ ಕರಾವಳಿಯಲ್ಲಿ ನಿರೀಕ್ಷೆಗಿಂತ ಅತಿ ಹೆಚ್ಚು ಮಳೆಯಾಗಿದೆ. ಆರು ತಿಂಗಳಲ್ಲಿ ಎಷ್ಟು ಮಳೆಯಾಗಿತ್ತೋ ಅಷ್ಟೇ ಪ್ರಮಾಣದ ಮಳೆ ಸುರಿದಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಯಾಯಿತು. ಕೆಲಂತನ್ ಹಾಗೂ ತೆರೆಂಗಾನು ರಾಜ್ಯಗಳಲ್ಲಿನ ಜನರು ಅತಿವೃಷ್ಟಿಯ ಪರಿಣಾಮಗಳಿಂದ ನಲುಗಿದ್ದಾರೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಹೇಳಿದ್ದಾರೆ.
ಮನೆಯಲ್ಲೇ ಸಿಲುಕಿರುವ ಸಂತ್ರಸ್ತರಿಗೆ ದೋಣಿಗಳಲ್ಲಿ ಸಾಗಿ ಸ್ವಯಂ ಸೇವಕರು ಊಟ ನೀಡುತ್ತಿದ್ದಾರೆ. ರಸ್ತೆಗಳೂ ಸೇರಿದಂತೆ ಮೂಲಸೌಕರ್ಯ ಹಾಳಾಗಿದೆ. ಎಲ್ಲವನ್ನೂ ಮರುನಿರ್ಮಿಸಲು ಸರ್ಕಾರಕ್ಕೆ ಅಂದಾಜು ನೂರು ಕೋಟಿ ರಿಂಗಿಟ್ (ಸುಮಾರು ₹19,000 ಕೋಟಿ) ವೆಚ್ಚವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.