ADVERTISEMENT

ಸಿಂಗಪುರ | ಸ್ಥಳೀಯರು ನಿರಾಕರಿಸಿದ ಕೆಲಸವಷ್ಟೇ ವಿದೇಶಿಯರ ಪಾಲು: ಸಚಿವ ಟ್ಯಾನ್

ಪಿಟಿಐ
Published 2 ಏಪ್ರಿಲ್ 2024, 10:15 IST
Last Updated 2 ಏಪ್ರಿಲ್ 2024, 10:15 IST
<div class="paragraphs"><p>ಸಿಂಗಪುರ</p></div>

ಸಿಂಗಪುರ

   

ಸಿಂಗಪುರ: ‘ಸಿಂಗಪುರ ಮೂಲದವರು ಬೇಡವೆಂದ ಕೆಲಸವನ್ನಷ್ಟೇ ವಿದೇಶಿಯರಿಗೆ ನೀಡಲಾಗಿದೆ’ ಎಂದು ಸಚಿವ ಟ್ಯಾನ್ ಸೀ ಲೆಂಗ್‌ ಸಂಸತ್ತಿಗೆ ಮಂಗಳವಾರ ತಿಳಿಸಿದ್ದಾರೆ.

ವಿದೇಶಿ ನೌಕರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕುರಿತ ಪ್ರಶ್ನೆಗೆ ಉತ್ತರ ರೂಪದಲ್ಲಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ADVERTISEMENT

‘ಕಳೆದ ವರ್ಷ ಸಿಂಗಪುರದಲ್ಲಿ ಉದ್ಯೋಗ ಸಂಖ್ಯೆಯ 88,400ರಷ್ಟಿತ್ತು. ಇದರಲ್ಲಿ 83,500 ಉದ್ಯೋಗಗಳು ಸಿಂಗಪುರ ಮೂಲದವರಲ್ಲದವರಿಗೆ ನೀಡಲಾಗಿದೆ’ ಎಂದು ನ್ಯೂಸ್ ಏಷ್ಯಾ ವರದಿ ಮಾಡಿತ್ತು.

ಈ ವರ್ಷ ಸೃಷ್ಟಿಯಾಗಲಿರುವ ಹೊಸ ಉದ್ಯೋಗಗಳಲ್ಲಿ ಸಿಂಗಪುರ ಮೂಲದವರಿಗೆ ಸಿಗುವುದೆಷ್ಟು ಮತ್ತು ಅದಕ್ಕಾಗಿ ಕೈಗೊಂಡ ಕ್ರಮಗಳು ಏನು ಎಂಬ ಸಂಸದರ ಪ್ರಶ್ನೆಗೆ ಟ್ಯಾನ್ ಉತ್ತರಿಸಿದರು.

ದೇಶದಲ್ಲಿ ಶೇ 77ರಷ್ಟು ಉದ್ಯೋಗ ಹೆಚ್ಚಳವಾಗಿದೆ. ವೃತ್ತಿ ನಿರ್ವಹಿಸುವವರಿಗೆ ನೀಡಲಾಗುವ ಪರವಾನಗಿ ಹಂಚಿಕೆ ಪ್ರಮಾಣ ಹೆಚ್ಚಳದಿಂದಾಗಿ ಸುಮಾರು 64,800 ಉದ್ಯೋಗಗಳು 2023ರಲ್ಲಿ ಸೃಜನೆಯಾಗಿವೆ. ಇದರಲ್ಲಿ ನಿರ್ಮಾಣ ಕ್ಷೇತ್ರದಿಂದ ಹೆಚ್ಚಿನ ಬೇಡಿಕೆ ಇದೆ. ಆದರೆ ಸಿಂಗಪುರದ ನಿವಾಸಿಗಳು ಇಂಥ ಕೆಲಸವನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳುವುದಿಲ್ಲ’ ಎಂದಿದ್ದಾರೆ.

ಕೋವಿಡ್–19ರ ಕಾಲಘಟ್ಟಕ್ಕೆ ಹೋಲಿಸಿದರೆ ವೃತ್ತಿಪರರು, ವ್ಯವಸ್ಥಾಪಕರು, ತಂತ್ರಜ್ಞರ ಬೇಡಿಕೆ ಹೆಚ್ಚಾಗಿದೆ. ವೃತ್ತಿಪರರು ಮತ್ತು ಕುಶಲಕರ್ಮಿಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇದೆ. ಜಗತ್ತಿನ ಮುಂಚೂಣಿಯಲ್ಲಿರುವ ನಗರಗಳಲ್ಲಿ ಇಂಥ ಕಾರ್ಮಿಕರ ಕೊರತೆ ಸಾಕಷ್ಟಿದೆ. ಇಂಥ ಸಂದರ್ಭದಲ್ಲಿ ನಮ್ಮಲ್ಲಿರುವ ಉದ್ಯಮಗಳು ಪ್ರತಿಭಾವಂತರನ್ನು ಸೆಳೆಯುವಂತಾಗಬೇಕು. ಆ ಮೂಲಕ ಈ ಕ್ಷೇತ್ರ ವಿಸ್ತರಿಸಬೇಕು’ ಎಂದಿದ್ದಾರೆ.

‘ಸಿಂಗಪುರದವರಿಗೆ ಲಭಿಸುತ್ತಿರುವ ಉದ್ಯೋಗ ಪ್ರಮಾಣ 2023ರಲ್ಲಿ ಶೇ 66.2ರಷ್ಟಿತ್ತು. ಇದು ಜಗತ್ತಿನ ಉತ್ತಮ ಆರ್ಥಿಕತೆಯ ದೇಶದಲ್ಲೇ ಅತ್ಯಧಿಕ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.