ADVERTISEMENT

ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮುರ್ಸಿ ನಿಧನ

ಕೋರ್ಟ್‌ನಲ್ಲಿ ಕುಸಿದು ಬಿದ್ದು ಸಾವು

ಏಜೆನ್ಸೀಸ್
Published 18 ಜೂನ್ 2019, 1:22 IST
Last Updated 18 ಜೂನ್ 2019, 1:22 IST
ಮೊಹಮ್ಮದ್ ಮುರ್ಸಿ
ಮೊಹಮ್ಮದ್ ಮುರ್ಸಿ    

ಕೈರೊ:ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮುರ್ಸಿ (67) ನಿಧನರಾಗಿದ್ದಾರೆ.

ಅವರನ್ನು ಸೋಮವಾರ ವಿಚಾರಣೆಗೆ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಹೇಳಿಕೆ ನೀಡಿದ ಕೆಲವು ನಿಮಿಷಗಳ ನಂತರ ಅವರು ಕುಸಿದುಬಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ನಿಧನರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಸ್ಲಿಂ ಬ್ರದರ್‌ಹುಡ್ ಪಕ್ಷದ ನಾಯಕರಾಗಿರುವ ಮುರ್ಸಿ ಅವರನ್ನು 2013ರ ಜುಲೈನಲ್ಲಿ ಈಜಿಪ್ಟ್‌ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿತ್ತು.ಹಿಂಸಾಕೃತ್ಯದಲ್ಲಿ ತೊಡಗಿದ್ದಲ್ಲದೆ, ದೇಶದ ಅರ್ಥ ವ್ಯವಸ್ಥೆಗೆ ಹಾನಿಯುಂಟುಮಾಡಿದ ಆರೋಪಗಳಿಂದಾಗಿ ಅವರನ್ನು ಪದಚ್ಯುತಗೊಳಿಸಲಾಗಿತ್ತು. 2013ರಿಂದಲೂ ಮುರ್ಸಿ ಜೈಲಿನಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದರು.

ADVERTISEMENT

2013ರಲ್ಲಿ ಮೊರ್ಸಿ ಬೆಂಬಲಿಗರು ಮತ್ತು ಸೇನೆಯ ನಡುವೆ ನಡೆದ ಘರ್ಷಣೆಯಲ್ಲಿ ನೂರಾರು ಜನ ಮೃತಪಟ್ಟಿದ್ದರು. ಅದಾದ ಬಳಿಕ ಈಜಿಪ್ಟ್‌ನಲ್ಲಿ ಹಿಂಸಾಚಾರ ತೀವ್ರಗೊಂಡಿತ್ತು.ಅಧ್ಯಕ್ಷ ಮೊರ್ಸಿ ಅವರನ್ನು ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರದ ವಿವಿಧೆಡೆ ಲಕ್ಷಾಂತರ ಜನರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸೇನಾ ಆಡಳಿತ ಮೊರ್ಸಿ ಅವರನ್ನು ಪದಚ್ಯುತಗೊಳಿಸಿದ್ದಲ್ಲದೆ, ಬಂಧಿಸಿ ಅಜ್ಞಾತ ಸ್ಥಳದಲ್ಲಿರಿಸಿತ್ತು.ಬಳಿಕ, ಪೊಲೀಸರ ಹತ್ಯೆ ಮತ್ತು ವಿದ್ವಂಸಕ ಕೃತ್ಯ ಪ್ರಕರಣಕ್ಕೆ ಸಾಮೂಹಿಕ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮೊರ್ಸಿ ಅವರ 529 ಬೆಂಬಲಿಗರಿಗೆ ಮರಣದಂಡನೆ ವಿಧಿಸಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.