ADVERTISEMENT

ಫ್ರಾನ್ಸ್‌ ಮಾಜಿ ಅಧ್ಯಕ್ಷ ನಿಕೋಲಸ್‌ ಸಕೊಜಿಗೆ ಒಂದು ವರ್ಷ ಬಂಧನ ಶಿಕ್ಷೆ

ಏಜೆನ್ಸೀಸ್
Published 30 ಸೆಪ್ಟೆಂಬರ್ 2021, 10:17 IST
Last Updated 30 ಸೆಪ್ಟೆಂಬರ್ 2021, 10:17 IST
ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೋಲಸ್‌ ಸಕೊಜಿ
ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೋಲಸ್‌ ಸಕೊಜಿ   

ಪ್ಯಾರಿಸ್‌: ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೋಲಸ್‌ ಸಕೊಜಿ (66) ಅವರಿಗೆ ಫ್ರಾನ್ಸ್‌ನ ನ್ಯಾಯಾಲಯವೊಂದು ಗುರುವಾರ ಒಂದು ವರ್ಷ ಬಂಧನ ಶಿಕ್ಷೆ ವಿಧಿಸಿದೆ.

2012ರ ಮರುಚುನಾವಣೆಯಲ್ಲಿ ಅನಧಿಕೃತ ಪ್ರಚಾರಕ್ಕಾಗಿ ಹಣಕಾಸು ಪೂರೈಕೆ ಮಾಡಿರುವ ಪ್ರಕರಣದಲ್ಲಿ ಸಕೊಜಿ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಸಕೊಜಿ ಜೈಲಿನಲ್ಲೇ ಶಿಕ್ಷೆಯ ಅವಧಿ ಕಳೆಯಬೇಕಿಲ್ಲ. ಅವರು ಗೃಹ ಬಂಧನದಲ್ಲಿ ಶಿಕ್ಷೆಯ ಅವಧಿ ಪೂರ್ಣಗೊಳಿಸಬಹುದು ಎಂದು ಕೋರ್ಟ್‌ ತೀರ್ಪಿನಲ್ಲಿ ತಿಳಿಸಿದೆ. ಅವರ ಮೇಲೆ ನಿಗಾ ಇಡುವ 'ಎಲೆಕ್ಟ್ರಾನಿಕ್‌ ಬ್ರಾಸ್ಲೆಟ್‌' ಅನ್ನು ಶಿಕ್ಷೆಯ ಅವಧಿ ಮುಗಿಯುವವರೆಗೂ ಧರಿಸಿರಬೇಕಾಗುತ್ತದೆ.

ADVERTISEMENT

ನಿಕೋಲಸ್‌ ಸಕೊಜಿ 2007ರಿಂದ 2012ರ ವರೆಗೂ ಫ್ರಾನ್ಸ್‌ನ ಅಧ್ಯಕ್ಷರಾಗಿದ್ದರು. ಕೋರ್ಟ್‌ನ ಈ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಸಕೊಜಿ ಪರ ವಕೀಲರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.