ಮುರಾಯಾಮ
ಟೋಕಿಯೊ: ಜಪಾನ್‌ನ ಮಾಜಿ ಪ್ರಧಾನಿ ತೊಮಿಯಿಚಿ ಮುರಾಯಾಮ ಅವರು ಶುಕ್ರವಾರ ಮೃತಪಟ್ಟಿದ್ದಾರೆ.
ಮುರಾಯಾಮ (101) ತಮ್ಮ ಹುಟ್ಟೂರು ನೈರುತ್ಯ ಜಪಾನ್‌ನ ಒಯಿಟಾದ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಜಪಾನ್‌ನ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮಿಜುಹೊ ಫುಕುಷಿಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್‌ನ ಕ್ರಮಗಳಿಂದ ತೊಂದರೆ ಅನುಭವಿಸಿದ ಏಷ್ಯಾದ ರಾಷ್ಟ್ರಗಳಲ್ಲಿ ಮುರಾಯಾಮ ಅವರು ಕ್ಷಮೆಯಾಚಿಸಿದ್ದರು. ಇದು 1995ರ ‘ಮುರಾಯಾಮ ಹೇಳಿಕೆ’ ಎಂದೇ ಹೆಸರುವಾಸಿಯಾಗಿತ್ತು.
ಹಿಂದೆ ಅವರು ‘ಜಪಾನ್ ಸೋಷಲಿಸ್ಟ್ ಪಾರ್ಟಿ’ ಎಂದು ಕರೆಯಲಾಗುತ್ತಿದ್ದ ಪಕ್ಷದ ನಾಯಕರಾಗಿದ್ದರು. ಮುರಾಯಾಮ ಅವರು ಜೂನ್ 1994ರಿಂದ ಜನವರಿ 1996ರವರೆಗೆ ಸಮ್ಮಿಶ್ರ ಸರ್ಕಾರ ಮುನ್ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.