ಕೊಲಂಬೊ: 2019ರ ಈಸ್ಟರ್ ಭಾನುವಾರದ ದಿನ ನಡೆದ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಪರಿಹಾರ ರೂಪದಲ್ಲಿ ನೀಡಬೇಕಿದ್ದ 100 ಮಿಲಿಯನ್ ಶ್ರೀಲಂಕಾ ರೂಪಾಯಿ (ಅಂದಾಜು ₹2.79 ಕೋಟಿ) ಮೊತ್ತವನ್ನು ಶ್ರೀಲಂಕಾದ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರು ಪೂರ್ತಿಯಾಗಿ ಪಾವತಿಸಿದ್ದಾರೆ. ಈ ದಾಳಿಯಲ್ಲಿ 270 ಮಂದಿ ಮೃತಪಟ್ಟಿದ್ದರು, ಇವರಲ್ಲಿ 11 ಮಂದಿ ಭಾರತೀಯರು.
ದೇಶದಲ್ಲಿ ದಾಳಿ ನಡೆಯಬಹುದು ಎಂಬ ನಂಬಲರ್ಹ ಮಾಹಿತಿ ಇದ್ದರೂ, ಅದನ್ನು ತಡೆಯುವ ಕೆಲಸದಲ್ಲಿ ಸಿರಿಸೇನ ಅವರು ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಸಂತ್ರಸ್ತರಿಗೆ ಒಟ್ಟು 100 ಮಿಲಿಯನ್ ಶ್ರೀಲಂಕಾ ರೂಪಾಯಿಯನ್ನು ಪರಿಹಾರವಾಗಿ ನೀಡಬೇಕು ಎಂದು ಅಲ್ಲಿನ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಸ್ಥಳೀಯ ಇಸ್ಲಾಮಿಕ್ ಸಂಘಟನೆಯಾದ ನ್ಯಾಷನಲ್ ತೌಹೀದ್ ಜಮಾತ್‌ಗೆ (ಎನ್‌ಟಿಜೆ) ಸೇರಿದ ಒಂಬತ್ತು ಮಂದಿ ಆತ್ಮಹತ್ಯಾ ಬಾಂಬರ್‌ಗಳು ಕ್ಯಾಥೊಲಿಕ್ ಸಮುದಾಯಕ್ಕೆ ಸೇರಿದ ಚರ್ಚ್‌ಗಳು ಹಾಗೂ ಐಷಾರಾಮಿ ಹೋಟೆಲ್‌ಗಳ ಮೇಲೆ ಈ ಭಯೋತ್ಪಾದಕ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಸಿರಿಸೇನ ಅವರು ದೇಶದ ರಕ್ಷಣಾ ಸಚಿವರೂ ಆಗಿದ್ದರು. ಎನ್‌ಟಿಜೆ ಸಂಘಟನೆಗೆ ಐಎಸ್‌ಐಎಸ್ ಜೊತೆ ನಂಟು ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.