ADVERTISEMENT

ಶ್ರೀಲಂಕಾ: ಸಹೋದ್ಯೋಗಿಯಿಂದಲೇ ಗುಂಡಿನ ದಾಳಿ, 4 ಸಾವು

ಪಿಟಿಐ
Published 25 ಡಿಸೆಂಬರ್ 2021, 10:58 IST
Last Updated 25 ಡಿಸೆಂಬರ್ 2021, 10:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಲಂಬೊ: ಶ್ರೀಲಂಕಾದ ಪೊಲೀಸ್ ಸಿಬ್ಬಂದಿಯೊಬ್ಬರು ಶನಿವಾರ ತಿರುಕ್ಕೋವಿಲ್‌ ಪಟ್ಟಣದ ಠಾಣೆಯಲ್ಲಿ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದಾರೆ.

ಕ್ರಿಸ್‌ಮಸ್ ಮುನ್ನಾದಿನ ಅವಘಡ ನಡೆದಿದ್ದು, ಗುಂಡಿನ ದಾಳಿಯಿಂದ ಮೂವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ದಾಳಿ ನಡೆಸಿದ್ದ ಸಿಬ್ಬಂದಿ ಬಳಿಕ ಟಿ56 ರೈಫಲ್‌ ಮತ್ತು 19 ಸುತ್ತು ಗುಂಡಿನೊಂದಿಗೆ ಎತಿಮಲೆ ಪೊಲೀಸ್‌ ಠಾಣೆಗೆ ಶರಣಾದರು. ದಾಳಿಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.