ADVERTISEMENT

ಹಕ್ಕಿಜ್ವರ: ಫ್ರಾನ್ಸ್‌ನಲ್ಲಿ 16 ಲಕ್ಷ ಹಕ್ಕಿಗಳ ಹತ್ಯೆ

ಏಜೆನ್ಸೀಸ್
Published 2 ಮೇ 2022, 16:38 IST
Last Updated 2 ಮೇ 2022, 16:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ಯಾರಿಸ್‌: ಕೋಳಿ, ಬಾತುಕೋಳಿ ಸೇರಿದಂತೆ ಇನ್ನಿತರ ಬರೋಬ್ಬರಿ 16 ಲಕ್ಷ ಹಕ್ಕಿಗಳನ್ನು ಕಳೆದ ವರ್ಷದ ನವೆಂಬರ್‌ನಿಂದ ಈಚೆಗೆ ಕೊಲ್ಲಲಾಗಿದೆ ಎಂದು ಫ್ರಾನ್ಸ್‌ ಕೃಷಿ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.

2015ರಿಂದ ಈಚೆಗೆ ದೇಶದಲ್ಲಿ ವಿವಿಧ ಸೋಂಕುಗಳು ಕಾಣಿಸಿಕೊಂಡಿವೆ. ಆದರೆ, ಅವು ಮುಖ್ಯವಾಗಿ ಲಾಭದಾಯಕ 'ಲಿವರ್‌ ಪೇಟ್‌' (ಒಂದು ಬಗೆಯ ಆಹಾರ)ಉದ್ಯಮಕ್ಕಾಗಿ ಬಾತುಕೋಳಿಗಳನ್ನು ಹೆಚ್ಚಾಗಿ ಸಾಕುವ ನೈರುತ್ಯ ಭಾಗದಲ್ಲಿಯೇ ಕಂಡುಬರುತ್ತಿದ್ದವು.ಆದರೆ, ಈ ಚಳಿಗಾಲದಲ್ಲಿ ಇದೇ ಮೊದಲ ಬಾರಿಗೆ, ದಕ್ಷಿಣ ಪ್ರದೇಶದಿಂದ ವಲಸೆ ಬಂದ ಪಕ್ಷಿಗಳು ಸಾಕು ಹಕ್ಕಿಗಳಿಗೆ ಸೋಂಕು ಹರಡಿವೆ. ಸೋಂಕಿನ ಪ್ರಮಾಣ ಈಗಷ್ಟೇ ಕಡಿಮೆಯಾಗುತ್ತಿದೆ ಎಂದುಸಚಿವಾಲಯ ತಿಳಿಸಿದೆ.

ಸುಮಾರು 1,400 ಕಡೆಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಹಕ್ಕಿಗಳನ್ನು ಕೊಲ್ಲುವುದನ್ನು ಸಚಿವಾಲಯ ಕಾರ್ಯತಂತ್ರವಾಗಿ ಪರಿಗಣಿಸಿದೆ ಎಂದುಹೇಳಿದೆ.

ADVERTISEMENT

ಸೋಂಕು ಹರಡುವಿಕೆಯು ಮಾರ್ಚ್‌ ಅಂತ್ಯದ ವೇಳೆಗೆ ಉತ್ತುಂಗಕ್ಕೇರಿತ್ತು ಮತ್ತು ಇದೀಗ ಕಡಿಮೆಯಾಗುತ್ತಾ ಬಂದಿದೆ.ಇಷ್ಟು ದೊಡ್ಡ ಪ್ರಮಾಣದಲ್ಲಿ ಹಕ್ಕಿಗಳನ್ನು ಹತ್ಯೆಮಾಡುವುದರಿಂದ ರಫ್ತು ಮಾರುಕಟ್ಟೆಗಳು ಸ್ಥಗಿತಗೊಳ್ಳಲಿವೆ. ಇದರಿಂದಾಗಿ ಸಾಕಣೆದಾರರಿಗೆ ಭಾರಿ ವೆಚ್ಚ ತಗುಲಲಿದೆ, ಅವರಿಗೆ ಪರಿಹಾರ ನೀಡಿ ಸರ್ಕಾರವೂ ನಷ್ಟ ಅನುಭವಿಸಲಿದೆ ಎಂದೂ ತಿಳಿಸಿದೆ.

ಸೋಂಕು ಏಕಾಏಕಿ ಏರಿದ್ದರಿಂದ ನವೆಂಬರ್‌ನಿಂದ ಈಚೆಗೆ ಮೊಟ್ಟೆ ಉತ್ಪಾದನೆಯಲ್ಲಿ ಶೇ 6ರಷ್ಟು ಕುಸಿತ ಉಂಟಾಗಿದೆ ಎಂದು ಮೊಟ್ಟೆ ಸಮಿತಿಯ (ಎನ್‌ಸಿಪಿಒ) ಉಪಾಧ್ಯಕ್ಷ ಲೊಯಿಕ್ ಕೂಲೊಂಬೆಲ್‌ ಹೇಳಿದ್ದಾರೆ.

ಕಳೆದ ವರ್ಷ ಸುಮಾರು 500 ಕಡೆ ಹಕ್ಕಿಜ್ವರ ಪತ್ತೆಯಾಗಿತ್ತು. ಆ ವೇಳೆ ಸುಮಾರು 35 ಲಕ್ಷ ಹಕ್ಕಿಗಳನ್ನು ಮುಖ್ಯವಾಗಿ ಬಾತುಕೋಳಿಗಳನ್ನು ಕೊಲ್ಲಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.